ಬೆಟಗೇರಿ, ಬೆಳಗಾವಿ: ಅನ್ಯಾಯದ ಕುರಿತು ನ್ಯಾಯ ಕೇಳುವ ಹಕ್ಕನ್ನು ನ್ಯಾಯಾಲಯ ಒದಗಿಸಿದ್ದು, ಕಾನೂನು ಅರಿವು ಎಲ್ಲರಿಗೂ ಅಗತ್ಯವಿದೆ ಎಂದು ಗೋಕಾಕ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಐ.ನೀಲಣ್ಣವರ ಹೇಳಿದರು.
ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಕಾನೂನು ಅರಿವು ಮೂಲಕ ನಾಗರಿಕರ ಸಬಲೀಕರಣ ಅಭಿಯಾನದಲ್ಲಿ ಅವರು ಮಾತನಾಡಿದರು.
ವಿವಿಧ ಕಾನೂನು ಕುರಿತು ವಕೀಲ ಶಿವಾನಂದ ಬನ್ನೂರ, ಅಂಗನವಾಡಿ ಮೇಲ್ವಿಚಾರಕಿ ಎಸ್.ಎಚ್.ದೇಸಾಯಿ ಮತ್ತು ವಕೀಲೆ ಸಂಗೀತಾ ಬನ್ನೂರ ಉಪನ್ಯಾಸ ನೀಡಿದರು. ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ ಚಾಲನೆ ನೀಡಿದರು. ವಿದ್ಯಾರ್ಥಿ ಚೇತನ ನೀಲಣ್ಣವರ ಮಾತನಾಡಿದರು. ಈರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ವಕೀಲ ಚಂದ್ರಶೇಖರ ನೀಲಣ್ಣವರ, ಭಗವಂತ ಹಳ್ಳಿ, ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಮಲೆಕ್ಕಾಧಿಕಾರಿ ಜೆ.ಎಂ.ನದಾಫ್, ಶ್ರೀಶೈಲ್ ಗಾಣಗಿ, ಬಸವರಾಜ ಪಣದಿ, ಈರಣ್ಣ ಬಳಿಗಾರ, ಶಿವಾಜಿ ನೀಲಣ್ಣವರ, ಲಕ್ಷ್ಮಣ ಸೋಮಗೌಡ್ರ ಇತರರಿದ್ದರು.