ಅಥಣಿ ಆರ್​ಎಸ್​ಪಿ ೌಂಡೇಷನ್​ ವತಿಯಿಂದ ಉಚಿತವಾಗಿ ಆಂಬುಲೆನ್ಸ್​ ಮತ್ತು ಅನ್ನದಾಸೊಹ ವಿತರಣೆಯ ಎರಡು ವಾಹನಗಳನ್ನು ಶಾಸಕ ರಮೇಶ ಜಾರಕಿಹೊಳಿ ಲೋಕಾರ್ಪಣೆಗೊಳಿಸಿದರು. ಮರುಳಸಿದ್ದ ಶ್ರೀ, ರವಿ ಪೂಜಾರಿ ಇತರರು ಇದ್ದರು. 
ಜಿಲ್ಲೆ

ಎಲ್ಲರಿಗೂ ಆರೋಗ್ಯದ ಅರಿವು ಇರಲಿ

ಅಥಣಿ: ಆಗರ್ಭ ಶ್ರೀಮಂತರು ಸಮಾಜಸೇವೆ ಮಾಡಲು ಮನಸ್ಸು ಮಾಡುವುದು ವಿರಳ. ಕಷ್ಟದಿಂದ ಬಂದವರಿಗೆ ಅನ್ನ&ಆರೋಗ್ಯದ ಮಹತ್ವ ಅರಿವು ಇರುತ್ತದೆ. ಅಂಥವರಿಂದ ಸಮಾಜಸೇವೆ ಜರುಗುತ್ತದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಆರ್​.ಎಸ್​.ಪಿ. ೌಂಡೇಷನ್​ ಹಾಗೂ ಸುವರ್ಣ ಕರ್ನಾಟಕ ಜನಸೇವಾ ಸಂಸ್ಥೆಯ ವತಿಯಿಂದ ಸೋಮವಾರ ಉಚಿತ ಅನ್ನದಾಸೋಹ ಹಾಗೂ ಉಚಿತ ಆಂಬುಲೆನ್ಸ್​ ಸೇವೆಗೆ ಚಾಲನೆ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜಸೇವೆಯಲ್ಲಿ ತೊಡಗಿರುವ ರವಿ ಪೂಜಾರಿ ಸೇವೆ ಶ್ಲಾನೀಯ. ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಜನರಿಗೆ ಉಚಿತ ಸೇವೆಯ ಸೌಲಭ್ಯ ದೊರೆಯಲಿ ಎಂದರು.

ಆರ್​ಎಸ್​ಪಿ ಸಂಸ್ಥಾಪಕ ಅಧ್ಯ ರವಿ ಪೂಜಾರಿ ಮಾತನಾಡಿ, ಬಡವರು ಮತ್ತು ನಿರ್ಗತಿಕರಿಗೆ ಪ್ರತಿದಿನ ಅನ್ನ ವಿತರಣೆ ಹಾಗೂ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಉಚಿತವಾಗಿ ಆಂಬುಲೆನ್ಸ್​ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದರು. ಮುಖಂಡರಾದ ಸತ್ಯಪ್ಪ ಬಾಗೆನ್ನವರ, ಸಿದ್ದಪ್ಪ ಮುದಕಣ್ಣವರ, ಧರೆಪ್ಪ ಠಕ್ಕಣವರ, ರಮೇಶಗೌಡ ಪಾಟೀಲ, ಪ್ರಭಾಕರ ಚೌಹಾನ್​, ರಾಜು ಐಹೊಳೆ, ವಿಠ್ಠಲ ಮಹಾರಾಜ ಮಾತನಾಡಿ, ರವಿ ಪೂಜಾರಿ ಸೇವೆ ಮೆಚ್ಚುಗೆ ವ್ಯಕ್ತಪಡಿಸಿದರು. ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಆಂಬುಲೆನ್ಸ್​ ಮತ್ತು ಅನ್ನ ವಿತರಣೆಯ ಎರಡು ವಾಹನಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಗಿರೀಶ ಬುಟಾಳೆ, ಅನಿಲ ಸೌದಾಗರ, ಸುನೀಲ ಸಂಕ, ಸಂತೋಷ ಕಕಮರಿ, ನಿಂಗಪ್ಪ ನಂದೇಶ್ವರ, ರವಿ ಸಂಕ, ಪಿ.ಪಿ.ಮೋರೆ, ಗೌತಮ ಪರಾಂಜಪೆ ಇದ್ದರು.