ಚಿತ್ರದುರ್ಗ:ವಿದ್ಯಾರ್ಥಿ ದಿಸೆಯಲ್ಲಿಯೇ ಪರಿಸರ ಕಾಳಜಿ ಬೆಳೆಸಿಕೊಳ್ಳುವಂತೆ ಚಿತ್ರದುರ್ಗ ಅರಣ್ಯ ಇಲಾಖೆ ಉಪವಲಯ ಅಧಿಕಾರಿ ಎಚ್.ಉಷಾರಾಣಿ ಹೇಳಿದರು. ನಗರದ ಚಂದ್ರವಳ್ಳಿ ಕೆರೆ ಬಳಿ ಸೋಮವಾರ ಅರಣ್ಯಇಲಾಖೆ ಹಾಗೂ ಡಾನ್ ಬೋಸ್ಕೋ ಕನ್ನಡ ಮಾಧ್ಯ ಮ ಶಾಲೆಯಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ‌್ಯಕ್ರಮದಲ್ಲಿ ಮಾತನಡಿದ ಅವರು,ಪರಿಸರ ಸಂರಕ್ಷಣೆ ಮಹತ್ವವನ್ನು ಎಲ್ಲರೂ ಅರಿಯ ಬೇಕಿದೆ ಎಂದರು. 150 ಸಸಿಗಳನ್ನು ನೆಡಲಾಯಿತು. ಶಾಲೆ ಆಡಳಿತಾಧಿಕಾರಿ ರೆ.ಫಾ.ಜಾನ್‌ಪಾಲ್,ಮುಖ್ಯಶಿಕ್ಷಕ ಬಸವಂತಕುಮಾರ್ ಮತ್ತಿತರರು ಇದ್ದರು.