ಗುರುಶಾಂತೇಶ್ವರ ಲಿಂಗ ಹಾಗೂ ನಂದಿ ಪ್ರತಿಷ್ಠಾಪನೆ ಸಮಾರಂಭವನ್ನು ಪವನ ಕತ್ತಿ ಉದ್ಘಾಟಿಸಿದರು. ವೀರಭದ್ರ ಶಿವಯೋಗಿ ಶಿವಾಚಾರ್ಯರು, ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀ, ಚಂದ್ರಶೇಖರ ಶಿವಾಚಾರ್ಯರು, ಶಿವು ನಂದಗಾಂವಿ, ಸಂಪತ್ತಕುಮಾರ ಶಾಸ್ತ್ರಿ, ರಾಚಯ್ಯ ಹಿರೇಮಠ, ಅಣ್ಣಪ್ಪ ಬ್ಯಾಳಿ, ಮಹಾದೇವ ಹತ್ತರವಾಟ ಇತರರಿದ್ದರು. 
ಜಿಲ್ಲೆ

ಎಲ್ಲರನ್ನೂ ಅಪ್ಪಿಕೊಳ್ಳುವ ಹಿರೇಮಠ

ಹುಕ್ಕೇರಿ: ಹುಕ್ಕೇರಿ ಹಿರೇಮಠ ಎಲ್ಲ ಜಾತಿ-ಜನಾಂಗದವರನ್ನು ಅಪ್ಪಿ-ಒಪ್ಪಿಕೊಳ್ಳುವ ಅಪರೂಪದ ಮಠ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.

ತಾಲೂಕಿನ ಬಿ.ಕೆ.ಶಿರಹಟ್ಟಿಯಲ್ಲಿ ಹುಕ್ಕೇರಿ ಹಿರೇಮಠದ ನೂತನ ಶಾಖಾಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗುರುಶಾಂತೇಶ್ವರ ಲಿಂಗ ಹಾಗೂ ನಂದಿ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕತ್ತಿ ಕುಟುಂಬ ಹಲವು ವರ್ಷಗಳಿಂದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಕಣ್ವಕುಪ್ಪಿಯ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀ ಮಾತನಾಡಿ, ಜಗತ್ತಿನಲ್ಲಿ ಆಧ್ಯಾತ್ಮಿಕ ತವರೂರು ಎನಿಸಿಕೊಂಡ ಭಾರತದಲ್ಲಿ ಜನ್ಮ ಪಡೆದದ್ದು ನಮ್ಮ ಭಾಗ್ಯ. ಗುರುಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯ ಶ್ರೀ ಈ ಭಾಗದಲ್ಲಿ ಹಲವು ಧಾರ್ಮಿಕ ಸೇವೆ ಸಲ್ಲಿಸಿದ್ದಾರೆ ಎಂದರು.

ಎಂ.ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯ ಶ್ರೀ ಮಾತನಾಡಿ, ಬಿ.ಕೆ. ಶಿರಹಟ್ಟಿ ಗ್ರಾಮದಲ್ಲಿ ನಿರ್ಮಾಣವಾದ ಹುಕ್ಕೇರಿ ಹಿರೇಮಠ ಶಾಖೆಯ ಗುರುಶಾಂತೇಶ್ವರ ಲಿಂಗ ಹಾಗೂ ನಂದಿ ಪವಾಡ ಅದ್ಭುತವಾದದ್ದು ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ಅಧ್ಯಕ್ಷತೆ ವಹಿಸಿದ್ದರು. ಎಂ.ಚಂದರಗಿ ಹಿರೇಮಠದ ಉತ್ತರಾಧಿಕಾರಿ ರೇಣುಕ ಗಡದೇಶ್ವರ ದೇವರು, ಶಿವು ನಂದಗಾಂವಿ, ಸಂಪತ್ತಕುಮಾರ ಶಾಸ್ತ್ರಿ, ರಾಚಯ್ಯ ಹಿರೇಮಠ, ಅಣ್ಣಪ್ಪ ಬ್ಯಾಳಿ, ಮಹಾದೇವ ಹತ್ತರವಾಟ, ಶಿವಾನಂದ ಡಂಗ, ಸಿದ್ರಾಮ ಖೋತ, ಬಸವಣ್ಣಿ ಶಿರಗಾಂವಿ, ಗುರಪ್ಪ ಸಂಕೇಶ್ವರ, ವಿಠ್ಠಲ ಹೊಸಮನಿ, ರಾಮ್ಮಣ್ಣ ಗೋಟೂರಿ, ಆನಂದ ದಪ್ಪಾದೂಳಿ, ಮಲ್ಲಪ್ಪ ಸಂಕೇಶ್ವರ ಇತರರಿದ್ದರು. ಶ್ರೀಶೈಲ ಹಿರೇಮಠ ನಿರೂಪಿಸಿದರು. ಅಖಿಲ ಭಾರತೀಯ ವೀರಶೈವ ಮಹಾಸಭೆಯ ತಾಲೂಕಾಧ್ಯಕ್ಷ ಶೀತಲ್ ಬ್ಯಾಳಿ ಸ್ವಾಗತಿಸಿ, ವಂದಿಸಿದರು.