ಜಿಲ್ಲೆ

ಎಲ್ಲರ ಹಕ್ಕು ರಸುವ ಸಂವಿಧಾನ ನೀಡಿದ ನಾಯಕ : ಬಾಬಾ ಸಾಹೇಬರ ಗುಣಗಾನ ಮಾಡಿದ ಮಾಜಿ ಸಿಎಂ ಎಚ್​ಡಿಕೆ

ಚನ್ನಪಟ್ಟಣ: ವಿಭಿನ್ನ ಭಾಷೆ ಹಾಗೂ ಹಲವು ಸಂಸತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಎಲ್ಲರೂ ಒಪು$್ಪವಂತಹ ಸಂವಿಧಾನ ನೀಡುವುದು ಅಷ್ಟು ಸುಲಭವಲ್ಲ. ಬಡವರು ಶ್ರೀಮಂತರು ಎಂಬ ಭೇದ&ಭಾವವಿಲ್ಲದೆ ಎಲ್ಲರಿಗೂ ಅವರದೇ ಆದ ಹಕ್ಕು ಸಿಗುವಂಥ ಸಂವಿಧಾನವನ್ನು ಡಾ.ಬಿ.ಆರ್​. ಅಂಬೇಡ್ಕರ್​ ನಮಗೆ ನೀಡಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಅಂಬೇಡ್ಕರ್​ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್​ ದಿನಾಚರಣೆಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ$್ಯ ಬಂದು ಹಲವು ವರ್ಷ ಕಳೆದರೂ ಇನ್ನು ಕೆಲವೆಡೆ ತಾರತಮ್ಯ ನಿಂತಿಲ್ಲ. ಹಲವು ವಿಭಿನ್ನತೆ ಮತ್ತು ವ್ಶೆರುಧ್ಯಗಳ ನಡುವೆಯೂ ದೇಶದ ಜನರು ಒಗ್ಗಟ್ಟಾಗಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್​ ನೀಡಿದ ಸಂವಿಧಾನ ಕಾರಣ ಎಂದು ಅಭಿಪ್ರಾಯಪಟ್ಟರು.

ಶೋಷಿತರ ಪರ ಅಂಬೇಡ್ಕರ್​ ಗಟ್ಟಿ ಧ್ವನಿಯಾಗಿ ನಿಂತ ಪರಿಣಾಮವಾಗಿಯೇ ಇಂದು ಶೋಷಿತರು ಸಮಾಜದ ಮುನ್ನೆಲೆಗೆ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಹಲವು ಹೋರಾಟಗಳು ನಡೆಯುತ್ತಿವೆ. ಹಲವು ಸಂಘಟನೆಗಳು ಧರ್ಮದ ಹೆಸರಿನಲ್ಲಿ ದೇಶದಲ್ಲಿನ ಸಾಮರಸ್ಯವನ್ನು ಹಾಳು ಮಾಡುವ ಹುನ್ನಾರ ನಡೆಸುತ್ತಿವೆ. ಮುಂದುವರಿದಿರುವ ಇಂದಿನ ಕಾಲಟ್ಟದಲ್ಲಿ ಈ ರೀತಿ ನಡೆಯುತ್ತಿರಬೇಕಾದರೆ, ಸ್ವಾತಂತ್ರ$್ಯ ಬಂದ ಹೊಸತರಲ್ಲಿ ಯಾವ ಪರಿಸ್ಥಿತಿ ಇತ್ತು ಎಂಬುದನ್ನು ಊಹಿಸುವುದು ಅಸಾಧ್ಯ. ಅಂಥ ದಿನಗಳಲ್ಲಿ ಎಲ್ಲರೂ ಒಪ್ಪುವಂತ ಸಂವಿಧಾನ ನೀಡುವ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನು ಗಟ್ಟಿಯಾಗಿ ನಿಂತಿದೆ ಎಂದರೆ ಅದಕ್ಕೆ ಬಾಬಾ ಸಾಹೇಬರು ಕಾರಣ ಎಂದರು.

ದೇಶ ಮುಂದುವರಿದಿದ್ದರೂ ಶ್ರೀಮಂತಿಕೆ ಕೆಲವೇ ಮಂದಿಯ ಸ್ವತ್ತಾಗಿದೆ. ಒಂದು ಕಾಲದಲ್ಲಿ ಬ್ಲಾಕ್​ಲಿಸ್ಟ್​ನಲ್ಲಿದ್ದ ವ್ಯಕ್ತಿಯೊಬ್ಬ ಇಂದು ಗಂಟೆಗೆ 52 ಕೋಟಿ ರೂ. ಹಣ ಗಳಿಸುತ್ತಿದ್ದಾನೆ ಎಂಬ ವರದಿ ಇದೆ. ಕಾಪೋರ್ರೇಟ್​ನಲ್ಲಿ ಕೆಲಸ ಮಾಡುವ ಎಕ್ಸಿಕ್ಯೂಟಿವ್​ ವರ್ಷಕ್ಕೆ ಪಡೆಯುವ ಸಂಬಳವನ್ನು ಹಳ್ಳಿಯಲ್ಲಿರುವ ಶ್ರಮಿಕ ಸಂಪಾದಿಸಲು 941 ವರ್ಷ ಬೇಕಾಗುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇಂಥ ತಾರತಮ್ಯ ಹೋಗಲಾಡಿಸಲು ನಾವೆಲ್ಲ ಶ್ರಮಿಸಬೇಕಿದೆ ಎಂದು ಎಚ್​ಡಿಕೆ ಹೇಳಿದರು.

ಭವನ ಹಾಳಾಗಲು ಅಧಿಕಾರಿಗಳೇ ಕಾರಣ: ನಗರದಲ್ಲಿ ನಿರ್ಮಿಸಿರುವ ಅಂಬೇಡ್ಕರ್​ ಭವನ ಉತ್ತಮ ಸ್ಥಿತಿಯಲ್ಲಿಲ್ಲ. ಈ ಭವನ ದುಸ್ಥಿತಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೇ ನೇರ ಕಾರಣ. ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸಿದ್ದರೆ, ಭವನದ ಸೆಲ್ಲರ್​ನಲ್ಲಿ ನೀರು ನಿಲ್ಲುತ್ತಿರಲಿಲ್ಲ. ಅಧಿಕಾರಿಗಳು ಮಾಡಿರುವ ಲೋಪಕ್ಕೆ ನಾನು ದೋಷಿಯೆನ್ನಿಸಿಕೊಳ್ಳಬೇಕಾಗಿದೆ. ಅವರು ಮಾಡಿರುವ ಕೆಲಸಕ್ಕೆ ಪಾಪಪ್ರಜ್ಞೆ ಕಾಡುತ್ತಿದೆ. ಭವನ ನಿಮಾರ್ಣದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಕಾಮಗಾರಿಗೆ ಅಗತ್ಯವಾಗಿರುವ 83 ಲಕ್ಷ ರೂ. ಮಂಜೂರು ಮಾಡಿಸಲು ಎಲ್ಲ ಕ್ರಮ ಕೈಗೊಂಡಿದ್ದೇನೆ. ಇದಲ್ಲದೇ ಸೆಲ್ಲ್ಲರ್​ನಲ್ಲಿ ನೀರು ನಿಲ್ಲುವ ಸಮಸ್ಯೆ ಪರಿಹರಿಸಲು ಮೋರಿ ನಿರ್ಮಿಸಿ ನೀರು ಬಾರದಂತೆ ತಡೆಯಲು ಯೋಜನೆ ರೂಪಿಸಲಾಗಿದೆ. ಆದರೆ, ಅಧಿಕಾರಿಗಳು ನನ್ನ ವೇಗಕ್ಕೆ ತಕ್ಕಂತೆ ಕೆಲಸ ಮಾಡದ ಪರಿಣಾಮ ಸಮಸ್ಯೆಯಾಗಿದೆ. ಇನ್ನಾದರೂ ಅಧಿಕಾರಿಗಳು ಆಗಿರುವ ಲೋಪಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ಎಚ್​.ಡಿ. ಕುಮಾರಸ್ವಾಮಿ ತಾಕೀತು ಮಾಡಿದರು.

ಅಂಬೇಡ್ಕರ್​ ಅಲೋಚನೆಗಳನ್ನು ಅಳವಡಿಸಿಕೊಳ್ಳಿ: ಸಾಹಿತಿ ಕಾಳೇಗೌಡ ನಾಗವಾರ ಮಾತನಾಡಿ, ಹುಟ್ಟು ನಮ್ಮ ಕೈಯಲ್ಲಿ ಇಲ್ಲ. ಆದರೆ, ಆಲೋಚನೆಗಳು ನಮ್ಮ ಕೈಯಲ್ಲೇ ಇವೆ. ನಾವು ಎಲ್ಲಿ ಹುಟ್ಟಬೇಕು ಎಂಬುದನ್ನು ವಿಧಿ ನಿರ್ಧರಿಸಿದರೆ, ಯಾವ ರೀತಿಯಲ್ಲಿ ಬದುಕಬೇಕೆಂಬುದನ್ನು ಆಲೋಚನೆಗಳು ನಿರ್ಧರಿಸುತ್ತವೆ. ನಾವುಗಳು ಅಂಬೇಡ್ಕರ್​ ತತ್ವ ಸಿದ್ಧಾಂತಗಳನ್ನು ಅನುಸರಿಸುವ ಮೂಲಕ ಅವರ ಅಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿ ಹಾಗೂ ಸಮಾನತೆಯಲ್ಲಿ ಅಂಬೇಡ್ಕರ್​ ಅವರ ಕೊಡುಗೆ ಅಪಾರ. ಮಹಿಳೆಯರಿಗೆ ಪುರುಷರಷ್ಟೇ ಹಕ್ಕಿದೆ ಎಂದು ಪ್ರತಿಪಾದಿಸಿದ ಮಹಾನಾಯಕ ಅವರು. ಅತ್ಯಂತ ಮುಂದುವರಿದ ದೇಶ ಎನಿಸಿರುವ ಅಮೇರಿಕಾ ಇನ್ನು ಮಹಿಳಾ ಅಧ್ಯಕ್ಷೆಯನ್ನು ಕಂಡಿಲ್ಲ. ಆದರೆ ಇಂದು ಭಾರತದ ಮಹಿಳೆ ಮುಖ್ಯಮಂತ್ರಿ, ಪ್ರಧಾನಿಯಂತ ಅತ್ಯುನ್ನತ ಹುದ್ದೆ ಅಲ್ಲಂಕರಿಸಿದ್ದರೆ ಅದಕ್ಕೆ ಅಂಬೇಡ್ಕರ್​ ಅವರ ಸಂವಿಧಾನವೇ ಕಾರಣ ಎಂದು ಬಣ್ಣಿಸಿದರು.

ನಗರಸಭೆ ಅಧ್ಯಕ್ಷ ಪ್ರಶಾಂತ್​, ತಹಸೀಲ್ದಾರ್​ ಎಲ್​. ನಾಗೇಶ್​, ಪೌರಾಯುಕ್ತ ಶಿವನಂಕಾರಿಗೌಡ. ತಾಪಂ ಇಒ ಚಂದ್ರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್​.ಎಂ.ಮಲುವೇಗೌಡ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಗಂಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್​, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್​ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.