ಐನಾಪುರ ಶ್ರೀ ಸಿದ್ದೇಶ್ವರ ದೇವಸ್ಥಾನದ ಬಳಿ ಶಾಸಕ ಶ್ರೀಮಂತ ಪಾಟೀಲ ಟ್ರೀ ಪಾರ್ಕ್ ಉದ್ಘಾಟಿಸಿ ಮಾತನಾಡಿದರು. ಆಂಥೋಣಿ ಮರಿಯಪ್ಪ, ಸುನೀತಾ ನಿಂಬರಗಿ, ರಾಜೇಶ ಬುರ್ಲಿ, ಸಂಜಯ ಮರಾಠೆ, ದಾದಾ ಪಾಟೀಲ, ತಮ್ಮಣ್ಣ ಪಾರಶೆಟ್ಟಿ ಇತರರು ಇದ್ದರು. 
ಜಿಲ್ಲೆ

ಎಲ್ಲರ ಮೇಲಿದೆ ಪರಿಸರ ರಕ್ಷಣೆ ಹೊಣೆ

ಐನಾಪುರ: ಬೆಳೆಯುತ್ತಿರುವ ಕೈಗಾರೀಕರಣ, ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯದಿಂದ ಅರಣ್ಯ ನಾಶವಾಗುತ್ತಿದ್ದು, ಪ್ರತಿಯೊಬ್ಬರೂ ಗಿಡಮರ ಬೆಳೆಸಿ ನಿಸರ್ಗ ಉಳಿಸಬೇಕು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಗುರುವಾರ ಟ್ರೀ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆಗಳ ರಾಸಾಯನಿಕ, ಕಲುಷಿತ ನೀರು ನದಿಗಳಿಗೆ ಸೇರುತ್ತಿದ್ದು, ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ತಡೆದು ಭೂಮಿ ರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಈ ಟ್ರೀ ಪಾರ್ಕ್‌ಗೆ ಮೊದಲು 15 ಲಕ್ಷ ರೂ., ನಂತರ 35 ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ರೂ.ವಿಶೇಷ ಅನುದಾನ ನೀಡಲಾಗಿದೆ.

50 ಲಕ್ಷ ರೂ. ವೆಚ್ಚದಲ್ಲಿ ಪೈಪ್‌ಲೈನ್ ನಿರ್ಮಿಸಿ ನದಿಯಿಂದ ಕೆರೆಗೆ ನೀರು ಹರಿಸಲಾಗುವುದು. ಕೆರೆಯಲ್ಲಿ ಬೋಟ್ ವ್ಯವಸ್ಥೆ ಮಾಡಲಾಗುವುದು. 10 ಎಕರೆ ಪ್ರದೇಶದಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ಖೇಲೋ ಇಂಡಿಯಾ ಮೈದಾನ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸಲಾಗುವುದು ಅಂದರು. ಸಸಿ ನೆಟ್ಟು ವನಮಹೋತ್ಸವ ಆಚರಿಸಿದ ಶಾಸಕರು, ಶಾಲಾ ಮಕ್ಕಳಿಗೆ ಸಸಿ ವಿತರಿಸಿದರು.

75ನೇ ಅಮೃತ ಮಹೋತ್ಸವದ ನಿಮಿತ್ತ ಪಪಂ ಸದಸ್ಯರಿಗೆ ರಾಷ್ಟ್ರಧ್ವಜ ನೀಡಿದರು. ಅರಣ್ಯ ಇಲಾಖೆ ಡಿಎಫ್‌ಒ ಅಂಥೋಣಿ ಮರಿಯಪ್ಪ, ತಹಸೀಲ್ದಾರ್ ರಾಜೇಶ ರಾಜೇಶ ಬುರ್ಲಿ ಮಾತನಾಡಿದರು. ಎಸಿಎಫ್ ಸುನಿತಾ ನಿಂಬರಗಿ, ಆರ್‌ಎಫ್‌ಒ ಪ್ರಶಾಂತ ಗಾಣಿಗೇರ, ಮುಖ್ಯಾಧಿಕಾರಿ ಎ.ಆರ್. ಕುಲಕರ್ಣಿ, ಧರ್ಮಸ್ಥಳದ ಯೋಜನಾಧಿಕಾರಿ ಸಂಜಯ ಮರಾಠೆ, ದಾದಾ ಪಾಟೀಲ, ತಮ್ಮಣ್ಣ ಪಾರಶೆಟ್ಟಿ, ರಾಜು ಪೋತದಾರ ಇತರರು ಇದ್ದರು.