ಜಿಲ್ಲೆ

ಎಲ್ಲರ ಏಳಿಗೆ ಬಯಸುವ ಅಬ್ಬೆತುಮಕೂರ ಮಠ

ಚನ್ನಬಸಯ್ಯ ಗುರುವಿನ

ಯಾದಗಿರಿ: ಜಾತಿ, ಮತ, ಪಂಥ ಮತ್ತು ಪಂಗಡಗಳ ಜಂಜಾಟವಿಲ್ಲದೆ ಸರ್ವ ಸಮಾನತೆಯ ಕೇಂದ್ರವಾಗಿದ್ದು, ಅಲ್ಲದೆ ಎಲ್ಲರ ಏಳಿಗೆ ಬಯಸುವ ಮಠ ಎಂದರೆ ಅದುವೇ ಅಬ್ಬೆತುಮಕೂರ ಮಠ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಶ್ರಾವಣ ಮಾಸದ ಮೊದಲ ಸೋಮವಾರ ವಿಶ್ವಾರಾಧ್ಯರ ಅನುಗ್ರಹ ಕ್ಷೇತ್ರಕ್ಕೆ ಭೇಟಿ ನೀಡಿ ಮಠದ ಪೀಠಾಧಿಪತಿಗಳಿಂದ ಆಶೀರ್ವಾದ ಪಡೆದು ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಅನೇಕ ಮಠಗಳಿದುದ, ಸಾಮಾಜಿಕ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಅಂತಹ ಪರಂಪರೆಯಲ್ಲಿ ವಿಶ್ವಾರಾಧ್ಯರ ಮಠವೂ ಕೂಡ ಒಂದಾಗಿದೆ ಎಂದು ಹೇಳಿದರು.

ಡಾ.ಗಂಗಾಧರ ಸ್ವಾಮೀಜಿ ಅವರು ಲೋಕ ಕಲ್ಯಾಣ ಮತ್ತು ಜನ ಕಲ್ಯಾಣದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಮಠದ ಪರಂಪರೆ ಮುನ್ನಡೆಸಿಕೊಂಡು ಬರುತ್ತಿರುವುದು ಈ ಭುವನದ ಭಾಗ್ಯ ಎಂದು ಬಣ್ಣಿಸಿದರು.

ಮಠದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಮಾತನಾಡಿ, ಸಚಿವರ ತಂದೆಯಾದ ಭೀಮಣ್ಣ ಖಂಡ್ರೆಯವರು ಮುತ್ಸದ್ದಿ ನಾಯಕನಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ ಹೋರಾಡಿದವರು. ಅಂತಹ ಪ್ರಬುದ್ಧ ರಾಜಕಾರಣಿಯ ಮಗನಾದ ಈಶ್ವರ ಖಂಡ್ರೆ ಅವರು ಕೂಡ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿದಿರು.

ಈ ವೇಳೆ ಕಿರಿಯ ಶ್ರೀಗಳಾದ ಶಿವಶೇಖರ ಶಿವಾಚಾರ್ಯ, ತಹಸೀಲ್ದಾರ್ ಸುರೇಶ ಅಂಕಲಗಿ, ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ ಬಿರಾದಾರ, ಚನ್ನಪ್ಪಗೌಡ ಮೋಸಂಬಿ, ವೆಂಕಟರೆಡ್ಡಿ ವನಿಕೇರಿ, ವಿಶ್ವನಾಥ ಶಿರವಾರ, ವಿಶ್ವನಾಥ ಠಾಣಗುಂದಿ ಇತರರಿದ್ದರು.