ಹುಲಸೂರಿನಲ್ಲಿ ಶುಕ್ರವಾರ ನಾಣಿಜಧಾಮದ ಶ್ರೀ ನರೇಂದ್ರಾಚಾರ್ಯ ಮಹಾರಾಜ ಸಂಸ್ಥಾನದಿಂದ ರಕ್ತದಾನ ಶಿಬಿರ ನಡೆಯಿತು. ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ , ಉಪಾಧ್ಯಕ್ಷೆ ಮೀರಾಬಾಯಿ ರಣಜಿತ್, ಮಲ್ಲಪ್ಪ ಧಬಾಲೆ, ಲತಾ ಹಾರಕೂಡೆ, ಸುಧೀರ ಕಾಡಾದಿ, ಓಂಕಾರ ಪಟ್ನೆ, ಚಂದ್ರಕಾಂತ ದೇಟ್ನೆ ಇತರರಿದ್ದರು. 
ಜಿಲ್ಲೆ

ಎಲ್ಲಕ್ಕಿಂತ ರಕ್ತದಾನ ಶ್ರೇಷ್ಠ

ರಾಜು ಯಮಕನಮರಡಿ

ಹುಲಸೂರು: ದಾನಗಳಲ್ಲೇ ರಕ್ತದಾನ ಶ್ರೇಷ್ಠವಾಗಿದ್ದು, ಯುವಕರು ಸ್ವಇಚ್ಛೆಯಿಂದ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಧೀರ ಕಾಡಾದಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ನಾಣಿಜಧಾಮದ ಶ್ರೀ ನರೇಂದ್ರಾಚಾರ್ಯ ಮಹಾರಾಜ ಸಂಸ್ಥಾನ ಏರ್ಪಡಿಸಿದ್ದ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಾಣ ಉಳಿಯಲು ರಕ್ತ ಮುಖ್ಯವಾಗಿದೆ. ಆರೋಗ್ಯವಂತರು ಸಂಕೋಚಪಡದೆ ಧಾರಾಳವಾಗಿ ರಕ್ತದಾನ ಮಾಡಿ ಪ್ರಮಾಣಪತ್ರ ಪಡೆಯಬೇಕು. ನೀವು ನೀಡುವ ಒಂದು ಹನಿ ರಕ್ತ ಸಹ ತುಂಬ ಅಮೂಲ್ಯ. ಮನುಷ್ಯನ ಪ್ರಾಣ ಉಳಿಸಲು ಸಹಕಾರಿಯಾಗಲಿದೆ ಎಂದರು.

ಶ್ರೀ ನರೇಂದ್ರಾಚಾರ್ಯ ಮಹಾರಾಜ ಸಂಸ್ಥಾನ ಸಂಘಟನಾ ಪ್ರಮುಖ ಅನಂತ ಪಂಚಾಳ ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಸಂಸ್ಥಾನದಿಂದ ಸರ್ಕಾರಕ್ಕೆ ನೀಡಲು ಒಂದು ಲಕ್ಷ ಜನರಿಂದ ರಕ್ತದಾನ ಮಾಡಿಸಲು ಶ್ರೀಗಳು ಸಂಕಲ್ಪ ಮಾಡಿದ್ದಾರೆ. ಈಗಾಗಲೇ ೯೮ ಸಾವಿರ ಜನ ರಕ್ತ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಶಶಿಕಾಂತ ಕನ್ನಾಡೆ, ಡಾ.ಅರ್ಚನಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾರಾಣಿ ಧರ್ಮೇಂದ್ರ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ರಣಜಿತ್ ಗಾಯಕವಾಡ, ಪ್ರಮುಖರಾದ ಲತಾ ಹಾರಕೂಡೆ, ಮಲ್ಲಪ್ಪ ಧಬಾಲೆ, ಓಂಕಾರ ಪಟ್ನೆ, ದೇವೇಂದ್ರ ಭೋಪಳೆ, ಸಂತೋಷ ಗಾಯಕವಾಡ, ವಿದ್ಯಾಸಾಗರ ಬನ್ಸುಡೆ, ಚಂದ್ರಕಾಂತ ದೇಟ್ನೆ, ಸಂಗಪ್ಪ ಮಂಗಾ, ದಿಲೀಪ ವಾಲೆ, ನಾಗೇಶ ಭೋಪಳೆ, ದತ್ತಾತ್ರೆ ಧನ್ನೂರೆ, ಹರುಬಾಯಿ ಧನ್ನೂರೆ, ಮಹಾದೇವಿ ತೆಲಂಗ, ಪೂಜಾ ಗೋಸ್ವಾಮಿ, ವಂದನಾತಾಯಿ, ಕಿಶನ್ ಗಾಯಕವಾಡ, ದಯಾನಂದ ಮೇತ್ರೆ ಇದ್ದರು. ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ನಡೆದ ಶಿಬಿರಕ್ಕೆ ಬೀದರ್ ಬ್ರಿಮ್ಸ್ ಸಿಬ್ಬಂದಿ ಸಹಕಾರ ನೀಡಿದರು.