ಜಿಲ್ಲೆ

ಎಲ್ಲಕ್ಕಿಂತ ದೇಹದಾನ ಶ್ರೇಷ್ಠವಾದದ್ದು

ಜಯತೀರ್ಥ ಪಾಟೀಲ

ಕಲಬುರಗಿ: ಇಎಸ್‌ಐಸಿ ವೈದ್ಯಕೀಯ ಸಂಸ್ಥೆ ಮತ್ತು ಆಸ್ಪತ್ರೆಯಲ್ಲಿ ಅಂಗರಚನಾಶಾಸ್ತç ವಿಭಾಗದಿಂದ ಶನಿವಾರ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ವೈಟ್‌ಕೋಟ್ ಧರಿಸುವ ಸಮಾರಂಭ ನಡೆಯಿತು. ಸಂಸ್ಥೆಯ ಡೀನ್ ಡಾ.ಕ್ಷೀರಸಾಗರ ಮಾತನಾಡಿ, ಎಲ್ಲ ದಾನಗಳಲ್ಲಿ ದೇಹದಾನ ಶ್ರೇಷ್ಠ. ದಾನಿಗಳು ದೇಹದಾನ ಮಾಡುವ ಮೂಲಕ ವೈದ್ಯಕೀಯ ಸಂಶೋಧನೆ, ಕಲಿಕೆಗೆ ಪ್ರೇರಣೆ ನೀಡಿದ್ದಾರೆ. ಜತೆಗೆ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ವೈದ್ಯಕೀಯ ಅಧೀಕ್ಷಕ ಡಾ.ಇವೊನೊ ಲೋಬೊ, ಅಂಗರಚನಾಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದೀನನಾಥ ಪೂಜಾರಿ ಇತರರಿದ್ದರು. ದೇಹದಾನ ಮಾಡಿದ ತಿಲಕನಗರದ ಸಿದ್ರಾಮಯ್ಯ, ಶಕುಂತಲಾ, ಶರಣಯ್ಯ ಮಠಪತಿ ಅವರನ್ನು ಸತ್ಕರಿಸಲಾಯಿತು.