ಜಿಲ್ಲೆ

ಎಲ್ಲ ೇತ್ರದಲ್ಲಿ ಸ್ತ್ರೀ ಸಾಧನೆಯ ಹೆಮ್ಮೆ

ಕಲಬುರಗಿ: ಭಾರತದಲ್ಲಿ ಮಹಿಳೆಯರು ಎಲ್ಲ ೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಸ್ತ್ರೀಯರನ್ನು ಗೌರವದಿಂದ ಕಾಣಬೇಕು. ಪ್ರಧಾನಿ, ರಾಷ್ಟ್ರಪತಿ ಸೇರಿ ಎಲ್ಲ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದು ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್​ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ನ್ಯಾಯಾಂಗ ನೌಕರರ ಸಂದಿಂದ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಪುರುಷರಂತೆ ಮಹಿಳೆಯರು ಉನ್ನತ ಸ್ಥಾನಗಳನ್ನು ಅಲಂಕರಿಸಿ, ಉತ್ತಮ ಬೆಳವಣಿಗೆಯನ್ನು ಕಾಣುತ್ತಿದ್ದಾರೆ ಎಂದು ಹೇಳಿದರು.

ಕೆಲ ದಶಕದ ಹಿಂದೆ ಕಲಬುರಗಿ ಜಿಲ್ಲಾ ಕೋರ್ಟ್​ನಲ್ಲಿ ಕೆಲಸ ನಿರ್ವಹಿಸುತ್ತಿದೆ. ಇಲ್ಲಿ ಹೆಮ್ಮೆಯಿಂದ ಕೆಲಸ ಮಾಡಿದ ಸಂತೃಪ್ತಿ ಇದೆ ಎಂದು ಸ್ಮರಿಸಿದರು. ಯಾವುದೇ ವೃತ್ತಿಯಲ್ಲಿ ಸೇವಾ ಮನೋಭಾವ, ಕರ್ತವ್ಯ ಪ್ರಜ್ಞೆ ಮುಖ್ಯವಾಗುತ್ತದೆ. ನಮಗೆ ಕೆಲಸ ಮಾಡಲು ಇರುವ ಕುರ್ಚಿಯ ಮೇಲೆ ವಿನಯವಿರಬೇಕು. ಅವಕಾಶ ಆಡಳಿತಕ್ಕಲ್ಲ ಸೇವೆಗೆ ಎಂದು ನಡೆಯಬೇಕು. ಕರ್ತವ್ಯ ಪಾಲನೆ ಇರಬೇಕೆ ಹೊರತು ದರ್ಪ ತೋರಲು ಅಲ್ಲ ಎಂದರು.

ಹೈಕೋರ್ಟ್​ ನ್ಯಾಯಮೂರ್ತಿ ಡಾ.ಚಿಲ್ಲಕೂರ ಸುಮಲತಾ ಮಾತನಾಡಿ, ಭಾರತ ಸೇರಿ ವಿಶ್ವದಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಶ್ರಮಪಡುತ್ತಾರೆ. ಯಾವುದೇ ವೃತ್ತಿಯಲ್ಲಿ ಮಹಿಳೆಯರಿಗೆ ಅಡ್ಡಿಗಳು ಜಾಸ್ತಿ. ಮದುವೆಯಾದಾಗ ವಿರಾಮ, ಗರ್ಭಿಣಿಯಾದಾಗ, ಹೆರಿಗೆಯಾದಾಗ ವೃತ್ತಿಗೆ ವಿರಾಮ ಪಡೆಯಬೇಕಾಗುತ್ತದೆ ಎಂದರು.

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಜ್ಯೋತಿಶ್ರಿ ಪಾಟೀಲ್​ ಮಾತನಾಡಿ, ಮಹಿಳೆಯರು ಮೌಢ್ಯ, ದಬ್ಬಾಳಿಕೆ ಖಂಡಿಸಬೇಕು. ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು. ಸಮಯ ಪ್ರಜ್ಞೆ ಮತ್ತು ತಾಳ್ಮೆ ರೂಢಿಸಿಕೊಂಡರೆ ಜೀವನದಲ್ಲಿ ಸಂತೃಪ್ತಿ ಕಾಣಲು ಸಾಧ್ಯ ಎಂದರು.

ನ್ಯಾಯಮೂರ್ತಿ ಕೆ.ನಟರಾಜ್​ ಮಾತನಾಡಿ, ಮಹಿಳೆ ಎಂದರೆ ಶಕ್ತಿ. ಆ ಶಕ್ತಿಯನ್ನು ಬೆಳಕಾಗಿ ಬಳಸಬೇಕು. ದುರ್ಬಳಕೆಗೆ ಯತ್ನಿಸಿದರೆ ಶಾಕ್​ ಹೊಡೆಯುತ್ತದೆ ಎಂದರು.

ಮಹಿಳಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕಾನೂನು ಸೇವ ಪ್ರಾಧಿಕಾರ ಅಧ್ಯಕ್ಷ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶ ಜಿ.ಎಲ್​.ಲ$್ಮನಾರಾಯ ಸ್ವಾಗತಿಸಿದರು. ಕಲಬುರಗಿ ವಕೀಲರ ಸಂದ ಅಧ್ಯಕ್ಷ ಗುಪ್ತಲಿಂಗ ಪಾಟೀಲ್​, ನ್ಯಾಯಾಂಗ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯ ಸುನೀಲಕುಮಾರ ಚಾಂದೆ ಇತರರಿದ್ದರು.