ಚಿತ್ರದುರ್ಗ: ಮಹಿಳೆಯರಿಗೆ ಅಕ್ಷರ ಕಲಿಸಿದ ಸಾವಿತ್ರಿಬಾಯಿಫುಲೆ ಅವರು ದೇಶದ ಪ್ರಥಮ ಶಿಕ್ಷಕಿ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಡಿ.ದು ರುಗೇಶಪ್ಪ ಹೇಳಿದರು.
ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾಸಮಿತಿ 14ನೇ ಸಂಸ್ಥಾಪನಾ ದಿನದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಾವಿತ್ರಿಬಾಯಿಫುಲೆ ಅವರ ಜನ್ಮ ಜಯಂತಿ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಅವರು ಎಲ್ಲ ವಿರೋಧಿಗಳನ್ನು ಎದುರಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಿದರು. ಶಿಕ್ಷಣದೊಂದಿಗೆ ರೋಗಿಗಳ ಆರೈಕೆ ಮಾಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದರು.
ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ,ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದ ಸಾವಿತ್ರಿಬಾಯಿಫುಲೆ ಅವರು ದೇಶದ ಉದ್ದಗ ಲಕ್ಕೂ ಸಂಚರಿಸಿ ಅನೇಕ ಕಡೆ ಶಾಲೆಗಳನ್ನು ತೆರೆದು ಶಿಕ್ಷಣದಿಂದ ವಂಚಿತರಾಗಿದ್ದ ಹೆಣ್ಣು ಮಕ್ಕಳನ್ನು ಅಕ್ಷರವಂತರನ್ನಾಗಿ ಮಾಡಲು ಶ್ರಮಿಸಿ ದ್ದಾರೆ. ಪುರೋಹಿತಶಾಹಿ ವಿರೋಧವನ್ನೂ ಎದುರಿಸಿ ಹೆಣ್ಣು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಸಮಿತಿ ಸಂಚಾಲಕ ಟಿ.ಮಂಜಣ್ಣ, ಬಿ.ಒ.ಗಂಗಾಧರಯ್ಯ, ಎಚ್.ಮಹಾಂತೇಶ್, ಜಿಲ್ಲಾಧ್ಯಕ್ಷ ಎಂ.ಮಹೇಶ್,ಉಪಾಧ್ಯಕ್ಷೆ ಮಾಲತಿ, ಕೆ.ರುದ್ರಮುನಿ, ಭಾಗ್ಯಮ್ಮ, ಮಂಜುನಾಥ್, ಕೆಂಚಪ್ಪ, ವರಮಹಾಲಕ್ಷ್ಮೀ ಮತ್ತಿತರರು ಇದ್ದರು.