ಶೃಂಗೇರಿ ಸಾಹಿತಿ ಆಗುಂಬೆ ಗಣೇಶ್ ಹೆಗಡೆ ಅವರ ಮನೆಯಲ್ಲಿ ಆಯೋಜಿಸಿದ್ದ ನುಡಿನಿತ್ಯೋತ್ಸವದಲ್ಲಿ ಪ್ರಗತಿಪರ ರೈತ ಮಕ್ಕಿಮನೆ ಜಯರಾಮ್ ಅವರನ್ನು ಗೌರವಿಸಲಾಯಿತು. ಯೋಗಪ್ಪ, ಆಗುಂಬೆ ಗಣೇಶ್ ಹೆಗಡೆ, ಬಿ.ಶಿವಶಂಕರ್ ಇತರರಿದ್ದರು. 
ಜಿಲ್ಲೆ

ಎಲ್ಲ ವಸ್ತಗಳೂ ಸಾಹಿತ್ಯಕ್ಕೆ ಸ್ಫೂರ್ತಿ

ಶೃಂಗೇರಿ: ಬದುಕಿನ ಎಲ್ಲವೂ ಕಾವ್ಯದ ವಸ್ತುವಾಗಬಹುದು. ಸೂರ್ಯ, ಚಂದ್ರ, ಇಬ್ಬನಿ, ಬಳ್ಳಿಗಳು ಹಾಗೂ ನಮ್ಮ ಬುದುಕಿನ ಅನುಭವಗಳು ಕವಿತೆಗಳಿಗೆ ಸ್ಫೂರ್ತಿಯಾಗಬಲ್ಲದು ಎಂದು ಸಾಹಿತಿ ಬಿ.ಶಿವಶಂಕರ್ ತಿಳಿಸಿದರು.

ಶನಿವಾರ ಸಾಹಿತಿ ಆಗುಂಬೆ ಗಣೇಶ್ ಹೆಗಡೆ ಅವರ ಹೆಬ್ಬಾಗಿಲು ಮನೆಯಲ್ಲಿ ಆಯೋಜಿಸಿದ ನುಡಿನಿತ್ಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತ್ಯ ಸತ್ ಚಿಂತನೆ, ವಿವೇಚನೆ ಹಾಗೂ ವಿಶಾಲತೆಯಿಂದ ಮಿಳಿತಗೊಂಡಿರಬೇಕು. ಆಗ ಮಾತ್ರ ನಮ್ಮ ವಿಚಾರಧಾರೆಗಳು ಉತ್ಕೃಷ್ಠವಾಗಿರಲು ಸಾಧ್ಯ. ಭಾವನಾತ್ಮಕ ಸಂಬಂಧಗಳು ನಮ್ಮಲ್ಲಿ ಇದ್ದಾಗ ಮಾತ್ರ ಸಮಾಜದ ಉನ್ನತೀಕರಣ ಸಾಧ್ಯ. ನಮ್ಮ ವಿಚಾರಗಳು ಬರವಣಿಗೆಗೆ ಸೀಮಿತವಾಗದೆ ಅದನ್ನು ಆಚರಣೆಗೆ ತರಬೇಕು. ವೈಷಮ್ಯ ಎನ್ನುವುದು ಸಾಹಿತಿಗಳ ಬೆಳವಣಿಗೆಗೆ ಮಾರಕ. ಚಿಂತನೆಗಳಲ್ಲಿ ಮಾನವೀಯ ಮೌಲ್ಯಗಳು ಅಡಕವಾಗಿದ್ದಾಗ ಮಾತ್ರ ನಾವು ಉತ್ತಮ ಸಾಹಿತಿಗಳಾಗುತ್ತೇವೆ. ಪ್ರಸ್ತುತ ಸನ್ನಿವೇಶದಲ್ಲಿ ಅಹಂ ಕಳಚಿಟ್ಟು ಮತ್ತೊಬ್ಬರಿಗೆ ಸಹಕಾರ ನೀಡುವುದೇ ಸಾಹಿತ್ಯದ ಆಶಯ ಎಂದು ಹೇಳಿದರು.

ಪ್ರಗತಿಪರ ಕೃಷಿಕ ಮಕ್ಕಿಮನೆ ಜಯರಾಮ್ ಅವರನ್ನು ಗೌರವಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಹೆಗ್ಗದ್ದೆ ಶಿವಾನಂದರಾವ್, ತಾಲೂಕು ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ್ ನಾಯ್ಕ, ಅಂಗುರ್ಡಿ ದಿನೇಶ್, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ನಿವೃತ್ತ ಶಿಕ್ಷಕ ಯೋಗಪ್ಪ, ಶುಭಶ್ರೀ ಭಟ್ಟ, ರಮೇಶ್, ಅಂಗುರ್ಡಿ ದಿನೇಶ್ ಇತರರಿದ್ದರು.