ಚಿತ್ರದುರ್ಗ: ಸಮಾಜದ ಕಟ್ಟ ಕಡೆಯ ಮಗುವಿಗೂ ಎಲ್ಲ ಸೌಲಭ್ಯಗಳು ದೊರೆತಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕರ ಕಚೇರಿ ಸಹ ನಿರ್ದೇಶಕ ಎಸ್.ಕೆ.ಬಿ ಪ್ರಸಾದ್ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಈಚೆಗೆ ಆಯೋಜಿಸಿದ್ದ ಗೃಹಾಧಾರಿತ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಶಿಕ್ಷಣ ಇಲಾಖೆ ಅನುದಾನದಲ್ಲಿ ಅವಶ್ಯಕ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ರಾಜ್ಯದ 1.67 ಕೋಟಿ ಮಕ್ಕಳಿಗೂ ಇಲಾಖೆಯ ಎಲ್ಲ ಸೌಲಭ್ಯಗಳು ದೊರೆಯುವಂತಾಗಬೇಕು.
ಚಿತ್ರದುರ್ಗ ತಾಲೂಕಿನಲ್ಲಿ 36 ಗೃಹಾಧಾರಿತ ಮಕ್ಕಳು ಇದ್ದು ಅವರಲ್ಲಿ ತೀವ್ರತರ ಅಗತ್ಯತೆಯುಳ್ಳ 7 ಮಕ್ಕಳಿಗೆ ವಿವಿಧ ಪರಿಕರಗಳನ್ನು ವಿತರಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್ ಮಾತನಾಡಿದರು. ಡಿವೈಪಿಸಿ ವೆಂಕಟೇಶಪ್ಪ, ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್, ತಾಲೂಕು ಅಧ್ಯಕ್ಷ ಕೆಂಚಪ್ಪ, ಜಿಲ್ಲಾ ನೌಕರರ ಸಂಘದ ಪದಾಧಿಕಾರಿ ಕೆ.ಟಿ. ತಿಮ್ಮಾರೆಡ್ಡಿ, ಬಿಆರ್‌ಸಿ ಸಂಪತ್‌ಕುಮಾರ್, ಶಿಕ್ಷಣ ಸಂಯೋಜಕ ಕೆ.ಆರ್. ಲೋಕೇಶ್, ಮೂರ್ತಾಚಾರ್, ಮಲ್ಲಿಕಾರ್ಜುನ್, ಅಂಜಿನಪ್ಪ, ರಮೇಶ್ ರೆಡ್ಡಿ, ರವೀಂದ್ರನಾಥ್, ಟಿಪಿಇಒ ಚನ್ನಬಸಪ್ಪ, ಬಿಐಇಆರ್‌ಟಿ ರಾಜೀವ್, ರಾಜಣ್ಣ ಇತರರಿದ್ದರು.
-----------