ಕಾಗವಾಡ: ಮನುಷ್ಯನಿಗೆ ಅಗತ್ಯವಿರುವ ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಉತ್ಪಾದಿಸುವುದು ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಇತರರಿಗೆ ಸಹಾಯ ಮಾಡಬೇಕು ಎಂದು ಡಾ.ಸುಧೀರ ಬೋಲೆ ತಿಳಿಸಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದ ಜಿನ್ನಪ್ಪಣ್ಣ್ಣ ಚೌಗುಲೆ ಲಾಲ್ ಬಹದ್ದೂರ್ ಸೌಹಾರ್ದ ಸಹಕಾರಿಯ ಸಂಸ್ಥಾಪಕ ದಿ.ಜಿನ್ನಪ್ಪಣ್ಣ ಚೌಗುಲೆಯವರ ೯ನೇ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಅಥಣಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ನೂರಕ್ಕೂಅಧಿಕ ಜನ ರಕ್ತದಾನ ಮಾಡಿದರು.
ಡಾ.ಸುಕುಮಾರ ಚೌಗುಲೆ, ಡಾ.ರವಿ ಕುರುಂದವಾಡೆ, ಡಾ.ರಾಜೇಂದ್ರ ಅಕಿವಾಟೆ, ಡಾ.ಅಶ್ವಿನಿ ಅಕಿವಾಟೆ, ಡಾ.ಅಮೋಲ ಸರಡೆ, ಡಾ.ಜಿತೇಂದ್ರ ಖೋತ್, ಡಾ.ಸುಲೇಮಾನ ತಾಂಬೋಳೆ, ಸಿಬಿಕೆಎಸ್‌ಎಸ್‌ಕೆ ನಿರ್ದೇಶಕ ಮಹಾವೀರ ಕಾತ್ರಾಳೆ, ಅಶೋಕ ಕಾತ್ರಾಳೆ, ಸಹಕಾರಿ ಅಧ್ಯಕ್ಷ ಭಮ್ಮಣ್ಣ ಚೌಗುಲೆ, ಉಪಾಧ್ಯಕ್ಷ ಶಾಲನ ಪಾಟೀಲ ಇತರರಿದ್ದರು. ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ ಚೌಗುಲೆ ನಿರೂಪಿಸಿದರು.