ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ವಕ್ಫ್ ವಿವಾದ ತಿರುಗುಬಾಣವಾದೀತು ಎಂಬ ಆತಂಕದಲ್ಲಿ ರಾಜ್ಯ ಸರ್ಕಾರ ಆಯಾ ಜಿಲ್ಲೆಗಳಲ್ಲಿ ನೋಟಿಸ್ ಕೊಟ್ಟಿರುವ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳಿಂದ ಮಾಹಿತಿ ಕೇಳಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ವಕ್ಫ್‌ಬೋರ್ಡ್‌ನಿಂದ ರೈತರಿಗೆ ನೋಟಿಸ್ ಜಾರಿಯಾಗುತ್ತಿದೆ. ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂಬ ಪ್ರಕರಣಗಳ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ರಾಜ್ಯಸರ್ಕಾರ ಲ್ಯಾಂಡ್ ಜಿಹಾದ್‌ಗೆ ಮುಂದಾಗಿದೆ ಎಂಬ ಪ್ರತಿಪಕ್ಷಗಳ ಆರೋಪ, ಆಡಳಿತಾರೂಢ ಪಕ್ಷದ ಪ್ರತ್ಯಾರೋಪ ಶುರುವಾಗಿದೆ.
ವಿಜಯಪುರ, ಬೀದರ್, ದಾವಣಗೆರೆ, ಕಲಬುರಗಿ, ಗದಗ, ಧಾರವಾಡ, ಯಾದಗಿರಿ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ಪ್ರಕರಣದ ಚರ್ಚೆ ಬಿರುಸಾಗುತ್ತಿದೆ. ಈ ನಡುವೆ ಪ್ರತಿಪಕ್ಷಗಳ ಸತ್ಯಶೋಧನಾ ಸಮಿತಿ ಪರಿಶೀಲನೆಗೆ ಮುಂದಾಗಿದೆ. ರೈತರು ಸಹ ಹೋರಾಟಕ್ಕೆ ಇಳಿದಿದ್ದಾರೆ. ಈ ಸನ್ನಿವೇಶದಲ್ಲಿ ಸಿಎಂ ಸಿದ್ದರಾಮಯ್ಯ ನೋಟಿಸ್ ಹಿಂಪಡೆಯುವುದಾಗಿ ಸಹ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಹೇಳಿಕೆಗೆ ಪೂರಕವೆಂಬಂತೆ ಹಾಗೂ ಬೈ ಎಲೆಕ್ಷನ್ ಕಾವು ಏರುತ್ತಿರುವ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಮುನ್ನೆಚ್ಚರಿಕೆ ಕ್ರಮವೋ ಎಂಬಂತೆ, ಕಂದಾಯ ಇಲಾಖೆ ಆಯುಕ್ತರು ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ನೋಟಿಸ್ ಏನಾದರೂ ಕೊಡಲಾಗಿ ದೆಯೇ ಎಂಬ ಮಾಹಿತಿಯನ್ನು ಮೌಖಿಕವಾಗಿ ಕೇಳಿದ್ದಾರೆ.
ಆಯುಕ್ತರ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ವಸ್ತು ಸ್ಥಿತಿ ವರದಿಯನ್ನು ಒಂದೇ ದಿನದೊಳಗೆ ಸಲ್ಲಿಸಿದ್ದಾರೆಂದು ಗೊ ತ್ತಾಗಿದೆ. 2019 ರಿಂದ 2023 ರ ಅವಧಿಯೊಳಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ತೆರವುಗೊಳಿಸುವ ಕುರಿ ತಂತೆ ರೈತರು ಅಥವಾ ಸಾರ್ವಜನಿಕರಿಗೆ ನೋಟಿಸ್ ನೀಡಿದ್ದರೆ ಕೂಡಲೇ ಮಾಹಿತಿ ಸಲ್ಲಿಸುವಂತೆ ಆಯುಕ್ತರು ಕೇಳಿದ್ದರು.
ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ, ವಕ್ಫ್ ಬೋರ್ಡ್ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಹಸೀಲ್ದಾರ್‌ಗಳಿಂದ ಮಾಹಿತಿ ಪಡೆ ದಿದ್ದು, ಯಾರಿಗೂ ನೋಟಿಸ್ ಕೊಟ್ಟಿಲ್ಲ ಎಂಬ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದೆ.
---
ಕೋಟ್
ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಯಾರಿಗಾದರೂ ನೋಟಿಸ್ ಕೊಡಲಾಗಿದೆಯೇ ಎಂದು ಸರ್ಕಾರ ಮಾಹಿತಿ ಕೇಳಿತ್ತು. ನಮ್ಮ ಜಿಲ್ಲೆಯ ಲ್ಲಿ ಅಂಥ ಪ್ರಕರಣಗಳಿಲ್ಲವೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಬಿ.ಟಿ.ಕುಮಾರಸ್ವಾಮಿ, ಎಡಿಸಿ, ಚಿತ್ರದುರ್ಗ.(ಸಿಟಿಡಿ 30 ಎಡಿಸಿ)
---