ಔರಾದ್: ದೇಶದ ಪ್ರತಿಯೊಬ್ಬ ಪ್ರಜೆಗೂ ನಿಜವಾದ ಸ್ವಾತಂತ್ರ್ಯ ನೀಡಿರುವುದೇ ಭಾರತ ಸಂವಿಧಾನ ಎಂದು ಕಲಬುರಗಿಯ ಚಿಂತಕ ಡಾ.ಹಣಮಂತರಾವ ದೊಡ್ಡಮನಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಸರ್ಕಾರಿ ತಾಲೂಕು ಎಸ್ಸಿ-ಎಸ್ಟಿ ನೌಕರರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಮತ್ತು ಎಸ್ಸಿ-ಎಸ್ಟಿ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಎಲ್ಲ ಜಾತಿ ಜನಾಂಗಕ್ಕೆ ಒಂದೇ ಸಂವಿಧಾನ ಎಂಬುದು ನಾವು ಅರಿತುಕೊಂಡು ಬದುಕಬೇಕು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ವಿರೋಧಿ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಶಾಂತಿ ಕದಡುವಂತೆ ಮಾಡುತ್ತಿರುವ ಕುರಿತು ಜಾಗೃತಿ ವಹಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ,ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಪಂಡರಿ ಆಡೆ, ಎಸ್ಸಿ-ಎಸ್ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಡೊಂಗ್ರೆ ಮಾತನಾಡಿದರು.
ಬೋರಾಳ ಸರ್ಕಾರಿ ಶಾಲೆಯ ೨ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ಶಿವಕುಮಾರ ಸಂವಿಧಾನ ಪೀಠಿಕೆ ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು.
ಪಂಚಾಯತ್ ರಾಜ್ ಇಲಾಖೆ ಎಇಇ ವೆಂಕಟ ಸಿಂಧೆ, ಸಮಾಜ ಕಲ್ಯಾಣ ಇಲಾಖೆ ಎಡಿ ಅನಿಲಕುಮಾರ, ರವೀಂದ್ರ ಮೇತ್ರೆ, ಡಾ.ಮನ್ಮಥ ಡೋಳೆ, ಗಣಪತಿ ಮೇತ್ರೆ, ವಿಶ್ವನಾಥ ಬಿರಾದಾರ, ಸಂಜುಕುಮಾರ ಮೇತ್ರೆ, ಮಹಾದೇವ ಚಿಟಗೀರೆ, ಸಂಜೀವ ಡೊಂಗರೆ, ರಮೇಶ ಶಿಂಧೆ, ಮಾರತಮ್ಮ ಮಾಳಗೆ, ಶಾಲಿವಾನ ರೋಗನ್, ಬಾಲಾಜಿ ಅಮರವಾಡಿ, ತುಳಸಿರಾಮ ಬೇಂದ್ರೆ, ಧನರಾಜ ಮಾನೆ, ದತ್ತಾತ್ರಿ ಗುಂಗೆ ಇತರರಿದ್ದರು.