ಹೂವಿನಹಡಗಲಿ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಯೋಜನೆಯಡಿ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷೆ ಜಮಲಾಬಿ, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಸದಸ್ಯರಾದ ವಾರದ ಗೌಸ್ ಮೋಹಿದ್ದೀನ್, ಶಫಿಸಾಬ್ ಇತರರಿದ್ದರು. 
ಜಿಲ್ಲೆ

ಎಲ್ಲ ಗ್ರಾಮಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ

ಗಾಯತ್ರಿ ಮಾಲಿಪಾಟೀಲ್

ಹೂವಿನಹಡಗಲಿ: ತಾಲೂಕನ್ನು ಕತ್ತಲೆಯಿಂದ ಮುಕ್ತಗೊಳಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ಕತ್ತಲೆಯಿಂದ ಬೆಳಕಿನೆಡೆಗೆ ಎಂಬ ಯೋಜನೆ ಜಾರಿಗೊಳಿಸಲಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇದನ್ನೂ ಓದಿ:

ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಕೆಕೆಆರ್‌ಡಿಬಿಯ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಎರಡು ಸಾವಿರ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಬೀದಿ ದೀಪ ಅಳವಡಿಸಿ ಕತ್ತಲೆಯಿಂದ ಮುಕ್ತಗೊಳಿಸಲಾಗುವುದು ಎಂದರು.

ಕಡಿಮೆ ವಿದ್ಯುತ್ ಬೇಡುವ ದೀಪಗಳನ್ನು ಅಳವಡಿಸಲಾಗುವುದು. ರಾತ್ರಿ ವೇಳೆ ಬೆಳಗುವ ಸ್ವಯಂಚಾಲಿತ 6500 ಬೀದಿ ದೀಪಗಳ ಅಳವಡಿಕೆಯ ಗುರಿ ಹೊಂದಲಾಗಿದೆ. ಆರಂಭದಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಬೀದಿ ದೀಪಗಳ ಅವಶ್ಯ ಇರುವ ಕಡೆ ಹೊಸ ದೀಪಗಳನ್ನು ಅಳವಡಿಸಲಾಗುವುದು. ತಾಲೂಕಿನಲ್ಲಿ 18 ಸಾವಿರ ವಿದ್ಯುತ್ ಕಂಬಗಳಿದ್ದು, ಹಂತ ಹಂತವಾಗಿ ದೀಪ ಅಳವಡಿಸಿಲಾಗುವುದು ಎಂದರು. ಪುರಸಭೆ ಅಧ್ಯಕ್ಷೆ ಜಮಲಾಬಿ, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಸದಸ್ಯರಾದ ಗೌಸ್ ಮೋಹಿದ್ದೀನ್, ಶಫಿಸಾಬ್, ಚಂದ್ರನಾಯ್ಕ ಇತರರಿದ್ದರು.