ಹುಮನಾಬಾದ್: ಪಟ್ಟಣ ಹೊರವಲಯದಲ್ಲಿ ವಾಯುಮಾಲಿನ್ಯ ಉಂಟು ಮಾಡುತ್ತಿದ್ದ ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ ವಿನಃ ಜಲಮಾಲಿನ್ಯ ಮಾಡುತ್ತಿರುವ ಕೆಮಿಕಲ್ ಕಾರ್ಖಾನೆ ಬಂದ್ ಆಗಿಲ್ಲ. ಸಂಪೂರ್ಣ ಬಂದ್ ಮಾಡಿಸುವ ಮೂಲಕ ಕ್ಷೇತ್ರದ ಶಾಸಕರು ಭರವಸೆ ಈಡೇರಿಸಿದ ಮಾತುಗಳನ್ನಾಡಲಿ ಎಂದು ಕಾಂಗ್ರೆಸ್ ತಾಲೂಕು ಅಧ್ಯಕ್ಷ ಓಂಕಾರ ತುಂಬಾ ಹೇಳಿz್ದÁರೆ. ಮಾಲಿನ್ಯ ಮಾಡುವ ಕಾರ್ಖಾನೆಗಳನ್ನು ಬಂದ್ ಮಾಡುವ ಭರವಸೆ ನೀಡಿದ ಶಾಸಕ ಡಾ.ಸಿದ್ದು ಪಾಟೀಲ್ ಅಧಿವೇಶನದಲ್ಲಿ ಧ್ವನಿ ಎತ್ತಿದ್ದು ಸ್ವಾಗತಾರ್ಹ. ಆದರೆ ಎಂಟು ಟೈರ್ ಪೈರೋಲಿಸಿಸ್ ಘಟಕ ಮುಚ್ಚಿಸಿ ಭರವಸೆ ಈಡೇರಿಸಿz್ದÉÃನೆ ಎಂಬುದು ಸರಿಯಲ್ಲ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ವಾಯು, ಜಲಮಾಲಿನ್ಯಕ್ಕೆ ಕಾರಣವಾಗಿರುವ ಕಾರ್ಖಾನೆಗಳನ್ನು ಬಂದ್ ಮಾಡಿಸಿ ಕ್ರೆಡಿಟ್ ಪಡೆಯಲಿ. ಹಿಂದೆ ಶಾಸಕರಾಗಿದ್ದ ರಾಜಶೇಖರ ಪಾಟೀಲ್ ಧ್ವನಿ ಎತ್ತಿದ್ದರಿಂದ ಎಂಟು ಕಾರ್ಖಾನೆ ಮುಚ್ಚಿಸಲಾಗಿತ್ತು ಎಂದರು. ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಅಫ್ಸರ್‌ಮಿಯಾ, ಪ್ರಮುಖರಾದ ನಿಜಾಮೋದ್ದಿನ್, ಶಿವರಾಯಪ್ಪ ಪಟ್ಟಪಳ್ಳಿ, ಮಾಣಿಕ ಮೊಳಕೇರಾ, ವಿನೋದ ನೀಲಮನಳ್ಳಿ, ಶಿವರಾಜ ರೋಗನ್, ರವೀಂದ್ರ ಆರ್ಯ, ದಿಲೀಪ ಮರಪಳ್ಳಿ, ಸಂತೋಷ ಭೂಶೆಟ್ಟಿ, ವೀರಪ್ಪ ಬಿರಾದಾರ, ಜ್ಞಾನರಾಜ ಕಮ್ಮಾ, ಸಾಯಿಕಿರಣ ಬೈನೊರ, ಉಮೇಶ ಜಮಗಿ ಇತರರಿದ್ದರು.