ಜಿಲ್ಲೆ

ಎಲ್ಲ ಇಲಾಖೆ ಮಂಜೂರಿಗೆ ಆದ್ಯತೆ

ಹುಣಸಗಿ: ಹೊಸ ತಾಲೂಕು ಹುಣಸಗಿ ಪಟ್ಟಣಕ್ಕೆ ಎಲ್ಲ ಇಲಾಖೆಗಳ ಮಂಜೂರಾತಿ ಸೇರಿದಂತೆ ಮೂಲಸೌಲಭ್ಯ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಭರವಸೆ ನಿಡಿದರು.

ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ನಿವೇಶನ ಪರಿಶೀಲನೆಗೆ ಭಾನುವಾರ ಪಟ್ಟಣಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮಿನಿ ವಿಧಾನಸೌಧ, ನ್ಯಾಯಾಲಯ, ಬಸ್ ಘಟಕ, ಪ್ರಧಮ ದರ್ಜೆ ಕಾಲೇಜು ಹಾಗೂ ಅಗ್ನಿ ಶಾಮಕ ದ ಸೇರಿ ವಿವಿಧ ಇಲಾಖೆಗಳನ್ನು ಮೊದಲ ಹಂತದ ನಿರ್ಮಾಣಕ್ಕಾಗಿ ನಿವೇಶನಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ದಿಶೆಯಲ್ಲಿ ಕನಗಂಡನಹಳ್ಳಿ ಬಳಿಯ ಸರ್ಕಾರಿ ಜಾಗ, ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿನ ಖಾಲಿ ನಿವೇಶನ ಅಲ್ಲದೆ ಈಗಿನ ಪಿಯುಸಿ ಕಾಲೇಜು ಆವರಣದಲ್ಲಿ ಉಳಿದಿರುವ ಸ್ಥಳವನ್ನು ಪರಿಶೀಲನೆ ಮಾಡಲಾಗಿದೆ ಎಂದರು.

ಈ ವೇಳೆ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಹಲವು ದಾಖಲೆಗಳ ಮಾಹಿತಿಯನ್ನು ಶಾಸಕರ ಗಮನಕ್ಕೆ ತಂದರು. ಈ ಎಲ್ಲ ಕಾರ್ಯಗಳಿಗೆ ಮುಂಬರುವ ದಿನಗಳಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಿದ್ದಣ್ಣ ಮಲಗಲದಿನ್ನಿ, ಚಂದ್ರಶೇಖರ ದಂಡಿನ, ವೆಂಕೋಬ ಯಾದವ, ಬಸವರಾಜ ಸಾಹು ಬಳಿ, ಆರ್.ಎಂ.ರೇವಡಿ ಇತರರಿದ್ದರು.