ಜಿಲ್ಲೆ

"ಎಲೆಚುಕ್ಕೆ ರೋಗ" ಪರಿಹಾರಕ್ಕೆ ಈ ಕ್ರಮ ಪಾಲಿಸಿ ಎಂದ ವಿಜ್ಞಾನಿ ಡಾ.ನಾರಾಯಣ ಸ್ವಾಮಿ

ಹೊಸನಗರ: ಮಲೆನಾಡು ಅಡಕೆ ಬೆಳೆಗಾರರನ್ನು ಬೆಂಬಿಡದೆ ಕಾಡುತ್ತಿರುವ ಎಲೆಚುಕ್ಕೆ ರೋಗಕ್ಕೆ ಶಿಲೀಂಧ್ರ ನಾಶಕವೇ ಪರಿಹಾರ ಎಂದಿರುವ ಶಿವಮೊಗ್ಗ ಅಡಕೆ ಮತ್ತು ತೋಟಗಾರಿಕಾ ಕಾಲೇಜಿನ ವಿಜ್ಞಾನಿ ಡಾ. ನಾರಾಯಣ ಸ್ವಾಮಿ, ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಸೂಚಿಸಿದ್ದು ಅವುಗಳು ಕೆಳಕಂಡಂತಿವೆ.

*ಜಿಟಿ ಜಿಟಿ ಮಳೆಯಿಂದ ಎಲೆಚುಕ್ಕಿರೋಗ ಹೆಚ್ಚುತ್ತಿದೆ. ವಾತಾವರಣ ತಿಳಿಯಾಗುತ್ತಿದ್ದಂತೆ ಸಾಮೂಹಿಕವಾಗಿ ರೋಗಪೀಡಿತ ಗರಿಗಳನ್ನು ಸುಡಬೇಕು

*ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಪೋಷಕಾಂಶವನ್ನು ನೀಡಬೇಕು. ಮಣ್ಣಿಗೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಸಾವಯವಗೊಬ್ಬರವನ್ನು ಟ್ರಿಕೊಡರ್ಮ ಜೈವಿಕಗೊಬ್ಬರದೊಂದಿಗೆ ಬುಡಕ್ಕೆ ಹಾಕಬೇಕು

*ಹತ್ತು ವರ್ಷದ ನಂತರದ ಗಿಡಗಳಿಗೆ 250 ಗ್ರಾಂ ಪೊಟ್ಯಾಷ್, 20 ಗ್ರಾಂ ಬೋರಾನ್, ಜಿಂಕ್, ಸಲ್ಫೇಟ್, ಸೇರಿದಂತೆ ಲಘು ಪೋಷಕಾಂಶ ನೀಡಬೇಕು.

*ರೋಗದ ಹತೋಟಿಗೆ 200 ಲೀ ನೀರಿಗೆ 450 ಗ್ರಾಂ ಮತ್ತು ಲಘು ಪೋಷಕಾಂಶಗಳ ಮಿಶ್ರಣ ಬೆರೆಸಿ ಬುಡ ಹಿಂಗಾರ, ಗರಿ ಮತ್ತು ಸುಳಿ ಸಂಪೂರ್ಣವಾಗಿ ನೆನೆಯುವಂತೆ ಸಿಂಪಡಿಸಬೇಕು.