ಚಾಮರಾಜನಗರ: ವರ್ಷ ಕಳೆಯುತ್ತಿರುವ ಹೊತ್ತಿನ ಹಿನ್ನೋಟದಲ್ಲಿ ಹಲವು ಬೆಳವಣಿಗೆಗಳ ನಡುವೆ ಲೋಕಸಭೆ ಚುನಾವಣೆ ಕಾವು ಜೋರಾಗಿತ್ತು.
2024 ಕೇವಲ ವರ್ಷವಾಗದೆ ತಣ್ಣನೆಯ ವಿದ್ಯಾಮಾನಗಳ ಸಂಚಿಕೆಯಾಯಿತು. ಜಿದ್ದಾಜಿದ್ದಿ ರಾಜಕಾರಣಕ್ಕೆ ಅಖಾಡವಾಯಿತು. ಸಂತಸದ ಸಂಗತಿಗಳಿಗೆ ವೇದಿಕೆಯಾಯಿತು. ದುಃಖದ ಸುದ್ದಿಗಳಿಗೆ ಹೆಗಲು ನೀಡಿತು. ಪ್ರಗತಿಯ ವೇಗ ಕಡಿಮೆ ಇರುವ, ಇತರ ಬೆಳವಣಿಗೆಗಳೂ ತಗ್ಗಿರುವ ಚಾಮರಾಜನಗರ ಜಿಲ್ಲೆಯನ್ನು ಸಾಧನೆಯ ಕಾರಣಕ್ಕೆ ತಿರುಗಿನೋಡುವಂತಹ ಕೆಲಸಗಳು ಆಗಿವೆ. ಮತಗಟ್ಟೆ ಧ್ವಂಸ ಪ್ರಕರಣ ಇತಿಹಾಸದಲ್ಲಿ ಕಪ್ಪುಚುಕ್ಕಿಯಾಗಿ ಉಳಿಯುವಂತೆಯೂ ಮಾಡಿಬಿಟ್ಟಿತು. ಈ ವರ್ಷವೂ ಅಧಿಕಾರಿಗಳು ಬದಲಾಗಲಿಲ್ಲ, ವ್ಯವಸ್ಥೆ ಸುಧಾರಿಸಲಿಲ್ಲ ಎನ್ನುವುದಕ್ಕಿಂತ ಈ ವ್ಯವಸ್ಥೆಗೆ ಹೊಂದಿಕೊಂಡು ಹೋಗುವುದು ಮುಂದುವರಿಯಿತು. ಕೈಗಾರಿಕಾ ಪ್ರದೇಶದಲ್ಲಿ ಹೊಸ ್ಯಾಕ್ಟರಿಗಳ ಸ್ಥಾಪನೆ ಉದ್ಯೋಗದ ಆಶಾಭಾವನೆ ಮೂಡಿಸಿತು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ರೈತರ ನಿರಂತರ ಹೋರಾಟಗಳು ನಡೆದವು. ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಲೇ ಇಲ್ಲ. ನ್ಯಾಯಕ್ಕಾಗಿ ಅಲೆದಾಟ ತಪ್ಪಲಿಲ್ಲ. ಜನವರಿಯಿಂದ ಜೂನ್‌ವರೆಗೆ ಗತಿಸಿದ ಇಂತಹ ಹಲವು ಬೆಳವಣಿಗೆಗಳ ಮೆಲುಕು ಇಲ್ಲಿದೆ.
ವರ್ಷದ ಆರಂಭಿಕ ತಿಂಗಳ ನೋಟ:
ನವದೆಹಲಿಯಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಜಿಲ್ಲೆಯ ಕವಿ ಬಿ.ಎಂ.ಮಂಜುನಾಥ್, ಕೇಂದ್ರ ಸಹಕಾರ ಸಚಿವಾಲಯದಿಂದ ಆಹ್ವಾನದ ಮೇರೆಗೆ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ನಾಗರಾಜು ಹಾಗೂ ಪತ್ನಿ ರಾಜೇಶ್ವರಿ ಭಾಗವಹಿಸಿದ್ದರು. ಹಿರಿಯ ಗಾಂಧಿವಾದಿ ಸಿ.ಪಿ.ಹುಚ್ಚೇಗೌಡ(90) ನಿಧನ ಮಂಕು ಕವಿಯುವಂತೆ ಮಾಡಿತು. ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಸ್ಥಾನ ಸಿಕ್ಕಿತು. ಬಿಜೆಪಿ ಅಧ್ಯಕ್ಷರಾದ ಬಳಿಕ ಬಿ.ವೈ.ವಿಜಯೇಂದ್ರ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ್ದರು. ಕೊಳ್ಳೇಗಾಲದ ಪಟ್ಟಣದ ಲಿಂಗಣಾಪುರದ ನಿವಾಸಿ ಮಹದೇವಪ್ಪ ಪುತ್ರ ನಂದೀಶ್(28) ಸಾವಿನ ಪ್ರಕರಣ ವಿವಾದ ಸೃಷ್ಟಿ ಮಾಡಿತ್ತು. ಪ್ರತಿಭಟನೆಯ ಕಾವು ಜೋರಾಗಿತ್ತು. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತ ಸಂಘದವ ವತಿಯಿಂದ ಶ್ರೀ ಮಲೆ ಮಹದೇಶ್ವರಬೆಟ್ಟದಿಂದ ಜಿಲ್ಲಾ ಕೇಂದ್ರದ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿವಾದ ಭುಗಿಲೆದ್ದಿತ್ತು. ಗುಂಡ್ಲುಪೇಟೆ ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್‌ಗೆ ಬಿಜೆಪಿ ಜಿಲ್ಲಾಧ್ಯಕ್ಷ ಜವಾಬ್ದಾರಿ ದೊರೆಯಿತು. ಅಯೋಧ್ಯೆಯಲ್ಲಿ ಜ.22ರಂದು ನಡೆದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ವಿರಕ್ತ ಮಠದ ಪೀಠಾಧಿಪತಿ ಶ್ರೀ ಶ್ರೀಕಂಠಸ್ವಾಮೀಜಿಗೆ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಜಿಲ್ಲಾದ್ಯಂತ ಪೂಜೆ ಪುನಸ್ಕಾರಗಳು ನಡೆದವು.
ಕೇಂದ್ರ ಮತ್ತು ರಾಜ್ಯ ಬಜೆಟ್ ಮಂಡನೆ:
ೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಮಂಡನೆಯಾಯಿತು. ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಮಂತ್ರವನ್ನು ಜಪಿಸಿದರು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್‌ಗೆ ವಿವಿಧ ಕೊಡುಗೆಗಳು ದೊರೆತರು. ಆಯವ್ಯಯದಲ್ಲಿ ಯಳಂದೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳನ್ನು 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು, ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಬಂಡೀಪುರದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್‌ಗಳನ್ನು ಜೆ.ಎಲ್.ಆರ್. ಸಂಸ್ಥೆ ಮೂಲಕ ನಿರ್ಮಾಣ ಮಾಡಲಾಗುವುದು, ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಆನೆ ಕಾರ್ಯ ಪಡೆ ರಚನೆ ಮತ್ತು ಹೆಚ್ಚುವರಿ ಮಾನವ ಸಂಪನ್ಮೂಲ ನೀಡುವುದಾಗಿ ೋಷಿಸಿದರು. ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಬೃಹತ್ ಮಟ್ಟದ ಜಾಥಾ ನಡೆಯಿತು. ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪಾದಯಾತ್ರೆ ನಡೆಯಿತು.
ಪ್ರಸಾದ್ ರಾಜಕೀಯ ನಿವೃತ್ತಿ ೋಷಣೆ:
ಮಾರ್ಚ್‌ನಲ್ಲಿ ರಾಜಕೀಯ ರಂಗು ಪಡೆದುಕೊಂಡಿತ್ತು. ಲೋಕಸಭೆ ಚುನಾವಣೆ ಹೊಸ್ತಿನಲ್ಲಿ ನಿರ್ಗಮಿತ ಸಂಸದ, ಹಿರಿಯ ರಾಜಕೀಯ ಮುತ್ಸದ್ದಿ ದಿ.ವಿ.ಶ್ರೀನಿವಾಸಪ್ರಸಾದ್ ರಾಜಕೀಯ ನಿವೃತ್ತಿ ೋಷಣೆ (ಮಾ.17) ಮಾಡಿದರು. ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡರು. ತಾಲೂಕಿನ ಮಂಗಲ ಗ್ರಾಮದಲ್ಲಿ ನೆಲೆಸಿರುವ ಶ್ರೀ ಬೀರೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಜಾತ್ರೆ ನಡೆಯಿತು. ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಕೊಳ್ಳೇಗಾಲ ಮಾಜಿ ಶಾಸಕ ಎಸ್.ಬಾಲರಾಜು ಅವರಿಗೆ ಟಿಕೆಟ್ ದೊರೆಯಿತು. ಮಾಜಿ ಶಾಸಕ ಎಸ್.ಜಯಣ್ಣ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ದೊರೆಯಿತು. ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಎದುರಿಸಿದರು. ಕೊಳ್ಳೇಗಾಲ ಮಾಜಿ ಶಾಸಕ ದಿ.ಎಸ್.ಜಯಣ್ಣಗೆ ರಾಜ್ಯ ಅನುಸೂಚಿತ ಜಾತಿ(ಎಸ್ಸಿ) ಅನುಸೂಚಿತ ಬುಡಕಟ್ಟುಗಳ(ಎಸ್‌ಟಿ) ಆಯೋಗದ ಅಧ್ಯಕ್ಷ ಸ್ಥಾನ ದೊರೆಯಿತು. ಇದನ್ನು ನಿರಾಕರಿಸಿದ ಕಾರಣ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಅವರಿಗೆ ಕಾವೇರಿ ಜಲಾನಯನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ(ಕಾಡಾ) ಅಧ್ಯಕ್ಷ ಸ್ಥಾನ ದೊರೆಯಿತು.
ಏಪ್ರಿಲ್‌ನಲ್ಲಿ ಎಲೆಕ್ಷನ್ ಕಾವು:
ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸುನೀಲ್‌ಬೋಸ್ ಮತ್ತು ಬಿಜೆಪಿಯಿಂದ ಎಸ್.ಬಾಲರಾಜು ನಡುವೆ ಸ್ಪರ್ಧೆ ನಡೆಯಿತು. ಇವರ ಪರವಾಗಿ ಪಕ್ಷದ ಘಟಾನುಘಟಿ ನಾಯಕರಿಂದ ಅಬ್ಬರದ ಪ್ರಚಾರ ನಡೆಯಿತು. ಏ.26ರಂದು ಮತದಾನ ನಡೆಯಿತು. ಮೂಲಸೌಕರ್ಯಗಳಿಗೆ ಒತ್ತಾಯಿಸಿ ಮತದಾನ ಬಹಿಷ್ಕಾರ ಹಾಕಿದ್ದ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತದಲ್ಲಿ ಮತಗಟ್ಟೆ ಧ್ವಂಸ ಪ್ರಕರಣ ನಡೆಯಿತು. ಪರಿಸ್ಥಿತಿ ಶಾಂತಗೊಂಡ ಕೆಲವು ದಿನಗಳ ಬಳಿಕ ಮರು ಮತದಾನ ನಡೆಯಿತು. ಪಿಯುಸಿ ಪರೀಕ್ಷೆ ಲಿತಾಂಶದಲ್ಲಿ ಚಾ.ನಗರಕ್ಕೆ 14ನೇ ಸ್ಥಾನ ಬಂತು. ರಾಜಕೀಯವಾಗಿ ವಿರೋಧಿಗಳಂತಿದ್ದ ಹಳೆಯ ಗೆಳೆಯರಾದ ಸಿಎಂ ಸಿದ್ದರಾಮಯ್ಯ ಮತ್ತು ಸಂಸದ ವಿ.ಶ್ರೀನಿವಾಸಪ್ರಸಾದ್ ಭೇಟಿ ಕ್ಷೇತ್ರದಲ್ಲಿ ಸಂಚಲನ ಮೂಡಿಸುವುದರ ಜತೆಗೆ ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿತು. ಗುಂಡ್ಲುಪೇಟೆ ತಾಲೂಕಿನ ಹಳ್ಳದ ಮಾದಹಳ್ಳಿಯ ರುದ್ರಾರಾಧ್ಯ ಮತ್ತು ಮಮತಾಮಣಿ ದಂಪತಿ ಪುತ್ರ ಎಚ್.ಆರ್.ಪ್ರಮೋದ್ ಆರಾಧ್ಯ ಯುಪಿಎಸ್‌ಇ ಪರೀಕ್ಷೆಯಲ್ಲಿ ಎರಡನೇ ಬಾರಿಗೆ ಆಯ್ಕೆಯಾದರು. ಸ್ವಾಭಿಮಾನದ ಚಕ್ರವರ್ತಿ, ಸಂಸದ ವಿ.ಶ್ರೀನಿವಾಸಪ್ರಸಾದ್ ನಿಧನರಾಗಿ ನಿರ್ವಾತ ಸೃಷ್ಟಿಸಿದರು.
ಇಂಡಿಗನತ್ತ-ಮೆಂದಾರೆಗೆ ಕಷ್ಟದ ದಿನಗಳು:
ಮೇ ತಿಂಗಳ ಬೆಳವಣಿಗೆಗಳಲ್ಲಿ ಹನೂರು ತಾಲೂಕಿನ ಇಂಡಿಗನತ್ತ ಮತ್ತು ಮೆಂದಾರೆ ಕಷ್ಟಕರ ದಿನಗಳನ್ನು ಕಂಡವು. ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಇಂಡಿನಗತ್ತದ ಗ್ರಾಮಸ್ಥರು ಜೈಲು ಸೇರಿ ಸಮಸ್ಯೆ ಅನುಭವಿಸಿದ್ದರು. ಮೆಂದಾರೆ ಗ್ರಾಮಸ್ಥರು ಕಲ್ಲೇಟು ತಿಂದು ನೋವು ತಿಂದಿದ್ದರು. ಅಣ್ಣ ತಮ್ಮಂದಿರ ರೀತಿ ಇದ್ದ ಎರಡೂ ಗ್ರಾಮಗಳ ನಡುವಿನ ಬಾಂಧವ್ಯ ಹಾಳಾಗಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದ 50ನೇ ವರ್ಷದ ಅಂಗವಾಗಿ ಅರಣ್ಯ ಇಲಾಖೆ ಆರಂಭಿಸಿದ್ದ ‘ಬಂಡೀಪುರ ಯುವಮಿತ್ರ’ ಹೆಸರಿನ ವನ್ಯಜೀವಿ ಜಾಗೃತಿ ಕಾರ್ಯಕ್ರಮ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನ ಗೌರವಕ್ಕೆ ಪಾತ್ರವಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಲಿತಾಂಶದಲ್ಲಿ ಚಾಮರಾಜನಗರ ಜಿಲ್ಲೆ 24ನೇ ಸ್ಥಾನಕ್ಕೆ ಕುಸಿಯಿತು. ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಹಂಗಳ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿತ್ತು. ಆನೆಯ ಎರಡೂ ದಂತಗಳು ಉದ್ದವಾಗಿ ಬೆಳೆದು ಸೊಂಡಿಲನ್ನು ಬಳಸಲು ಸಾಧ್ಯವಾಗದ ಕಾರಣ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ತಿನ್ನಲು ಬರುತ್ತಿತ್ತು. ಹಾಗಾಗಿ 2 ದಂತಗಳನ್ನು ಸ್ವಲ್ಪ ಕತ್ತರಿಸಿ ಸುಗಮವಾಗಿ ಸೊಂಡಿಲು ಬಳಸಲು ಅನುಕೂಲ ಮಾಡಲಾಗಿತ್ತು. ಬಂಡೀಪುರದ ಅರಣ್ಯ ಪ್ರದೇಶ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ವಿನಾಶದಂಚಿನಲ್ಲಿರುವ ಅಪರೂಪದ ಹೈನಾ (ಕತ್ತೆಕಿರುಬ) ಪತ್ತೆಯಾಗಿತ್ತು.
ಬೋಸ್‌ಗೆ ಭರ್ಜರಿ ಗೆಲುವು
ಜೂನ್‌ನಲ್ಲಿ ಲೋಕಸಭೆ ಚುನಾವಣೆಯ ಲಿತಾಂಶ ಹೊರಬಿತ್ತು. ಮತದಾರರು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಭರ್ಜರಿ ಗೆಲುವಿನ ಡೋಸ್ ಕೊಟ್ಟರು. ಇದು ಕ್ಷೇತ್ರದ ಪಾಲಿಗೆ ಇತಿಹಾಸ ನಿರ್ಮಾಣ ಮಾಡಿರುವ ಜಯವಾಯಿತು. ಸುನೀಲ್ ಬೋಸ್‌ಗೆ 7,51,671 ಮತ್ತು ಎಸ್.ಬಾಲರಾಜ್‌ಗೆ 5,62,965 ಮತಗಳು ಲಭಿಸಿದವು. ಈ ಮೂಲಕ ಬೋಸ್ 1,88,706 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಚಾ.ನಗರ- ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ 31ನೇ ಅಧ್ಯಕ್ಷರಾಗಿ ಮಹಮ್ಮದ್‌ಅಸ್ಗರ್ (ಮುನ್ನಾ) ಅಧಿಕಾರ ಸ್ವೀಕರಿಸಿದರು.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಸದ್ದು ಮಾಡಿದ್ದ ಮೆಂದಾರೆ ಗ್ರಾಮದ ಸೋಲಿಗರ ಪುನರ್ವಸತಿಗಾಗಿ ಅಧಿಕಾರಿಗಳು ಸರ್ವೇ ಮಾಡಿದರು.