ಶಹಾಬಾದ್ (ಕಲಬುರಗಿ): ಮುಂದಿನ ಮೂರು ದಶಕದಲ್ಲಿ ಭಾರತ ಉತ್ತರ, ದಕ್ಷಿಣ ಎಂದು ಎರಡು ಭಾಗವಾಗಿ ಒಡೆದು ಹೋಗುತ್ತದೆ. ಕರ್ನಾಟಕವೂ ಮೂರು ಹೋಳಾಗುತ್ತದೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬೆಂಗಳೂರಿನ ಶ್ರೀ ಸಂಪೂರ್ಣ ವರಮಹಾಲಕ್ಷ್ಮೀ ಮಹಾ ಸಂಸ್ಥಾನದ ವ್ಯವಸ್ಥಾಪಕ ನಿರ್ದೇಶಕರೂ ಆದ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರಬಾಬು ಶರ್ಮಾ ಭವಿಷ್ಯ ನುಡಿದರು.
ತೊನಸನಳ್ಳಿ(ಎಸ್) ಗ್ರಾಮದಲ್ಲಿ ಶ್ರೀ ಅಲ್ಲಮಪ್ರಭು, ಸುಲ್ತಾನ್ ಅಹ್ಮದ್ ಶಾಹವಲಿ ಜಾತ್ರೋತ್ಸವ, ಲಕ್ಷ ದೀಪೋತ್ಸವ ನಿಮಿತ್ತ ಶುಕ್ರವಾರ ಸಂಜೆ ಏರ್ಪಡಿಸಿದ್ದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ದೇವರು ಗರ್ಭಗುಡಿಯಿಂದ ರಥೋತ್ಸವ ಮೂಲಕ ಭಕ್ತರನ್ನು ಕಾಣಲು ಬರುತ್ತಾನೆ. ಈ ವೇಳೆ ಭಕ್ತರು ಎಲ್ಲವನ್ನು ದೇವರಿಗೆ ಅರ್ಪಣೆ ಮಾಡಿದಾಗಲೇ ಒಲಿಯುತ್ತಾನೆ ಎಂದರು.
ಗುರೂಜಿಗೆ ಅಲ್ಲಮಪ್ರಭು ಸಂಸ್ಥಾನ ಮಠದಿಂದ ಗುರುಸಾರ್ವಭೌಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.