ಹಾಸನ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಟಾಸ್ಕ್‌ಗಳನ್ನು ಕಂಪ್ಲೀಟ್ ಮಾಡಿದರೆ ಕಮಿಷನ್ ನೀಡುವುದಾಗಿ ನಂಬಿಸಿ ಸಂತ್ರಸ್ತರಿಂದ 2 ಲಕ್ಷ ರೂ. ಆನ್‌ಲೈನ್ ಮೂಲಕ ವಂಚನೆ ಎಸಗಲಾಗಿದೆ.
ಡಿ. 13ರಂದು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಅಪರಿಚಿತರು ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್ ನೀಡಿದ್ದು, ಟಾಸ್ಕ್‌ಗಳನ್ನು ಪೂರ್ಣ ಮಾಡಿದರೆ ಬೋನಸ್ ನೀಡುವುದಾಗಿ ತಿಳಿಸಿದ್ದರು. 6 ಟಾಸ್ಕ್‌ಗಳನ್ನು ಕಂಪ್ಲೀಟ್ ಮಾಡಿದ ನಂತರ ಟಾಸ್ಕ್‌ಗೆ ಕಮಿಷನ್ ಹಣವನ್ನು ಸೇರಿಸಿ ಕೊಡುವುದಾಗಿ ನಂಬಿಸಿದ್ದರು. ಡಿ.14ರಂದು ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ಬಾಳುಪೇಟೆಯ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆಯಿಂದ ಯುಪಿಐ ಮುಖಾಂತರ ಒಟ್ಟು 1.34 ಲಕ್ಷ ಹಣವನ್ನು ಹಾಕಿಸಿಕೊಂಡರು. ನಂತರ ಕಮಿಷನ್ ಸೇರಿದಂತೆ ನಾನು ಹಾಕಿದ ಹಣವನ್ನು ಹಿಂದಿರುಗಿಸದೆ ಮೋಸ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಪತ್ತೆಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಸಂತ್ರಸ್ತ ವ್ಯಕ್ತಿ ಡಿ.15ರಂದು ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಡಿ. 13ರಂದು ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಅಪರಿಚಿತರು ಟೆಲಿಗ್ರಾಂ ಆ್ಯಪ್‌ನಲ್ಲಿ ಟಾಸ್ಕ್ ನೀಡಿದ್ದು, ಟಾಸ್ಕ್‌ಗಳನ್ನು ಪೂರ್ಣ ಮಾಡಿದರೆ ಬೋನಸ್ ನೀಡುವುದಾಗಿ ನಂಬಿಸಿದ್ದರು. ಡಿ.15ರಂದು ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ಕೆನರಾ ಬ್ಯಾಂಕ್ ಖಾತೆ ಹಾಗೂ ಬ್ಯಾಂಕ್ ಆಫ್ ಬರೋಡ ಖಾತೆಯಿಂದ ಯುಪಿಐ ಮುಖಾಂತರ ಒಟ್ಟು 70 ಸಾವಿರ ಹಣವನ್ನು ಹಾಕಿಸಿಕೊಂಡರು. ನಂತರ ಕಮಿಷನ್ ಸೇರಿದಂತೆ ನಾನು ಹಾಕಿದ ಹಣವನ್ನು ಹಿಂದಿರುಗಿಸದೆ ಮೋಸ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಪತ್ತೆಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಸಂತ್ರಸ್ತ ವ್ಯಕ್ತಿ ಡಿ.15ರಂದು ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.