|ಎಮ್ಮೆ ಮೇಯಿಸಿರುವುದ್ದನ್ನು ಪ್ರಶ್ನೀಸಿದಕ್ಕೆ ಕೊಲೆ!
ಚಿಕ್ಕೋಡಿ: ಹೊಲದಲ್ಲಿ ಎಮ್ಮೆ ಮೇಯಿಸಿರುವುದನ್ನು ಪ್ರಶ್ನೆ ಮಾಡಿರುವುದಕ್ಕೆ ಸಿಟ್ಟಿಗೆದ್ದ ಎಮ್ಮೆ ಮಾಲೀಕರು ವೃದ್ಧನೊರ್ವನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮಾಂಗನೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಭೀಮಗೌಡ ರಾಮಗೌಡ ಪಾಟೀಲ(೭೦) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ನಾಗಪ್ಪ ಲಕ್ಷö್ಮಣ ಖೋತ ಮತ್ತು ಬಾಳಪ್ಪ ನಾಗಪ್ಪ ಖೋತ ಆರೋಪಿಗಳಾಗಿದ್ದಾರೆ.
ಮೃತ ಭೀಮಗೌಡ ಪಾಟೀಲನ ಪಕ್ಕದ ಜಮೀನಿನ ರೈತರಾದ ಆರೋಪಿತರು ತಮ್ಮ ದನಗಳನ್ನು ಕೊಲೆಯಾದ ಭೀಮಗೌಡ ಅವರ ಜಮೀನಿನ ಬದು ಮೇಯಿಸಿರುವುದನ್ನು ಪುತ್ರ ಕಲಗೌಡ ಪ್ರಶ್ನೇ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿತರು ಆತನ ಮೇಲೆ ಹಲ್ಲೆ ಮಾಡಿದ್ದಾರೆ,ಜಗಳ ಬಿಡಿಸಲು ಬಂದ ವೃದ್ದ ಭೀಮಗೌಡನನ್ನು ಬಲವಾಗಿ ತಳ್ಳಿದರಿಂದ ಆತ ಗಾಯಗೊಂಡು ಮೃತನಾಗಿದ್ದಾನೆ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.