ಜಿಲ್ಲೆ

ಎಪಿಎಲ್ ಕಾರ್ಡ ರದ್ದು ಮಾಡಿಲ್ಲ

ಬಾಗಲಕೋಟೆ: ರಾಜ್ಯದಲ್ಲಿ ಎಪಿಎಲ್ ಕಾರ್ಡಗಳನ್ನು ರದ್ದು ಮಾಡಿಲ್ಲ. ಕೆಲ ಅನರ್ಹರ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಿದ್ದೇವೆ ಅಷ್ಟೆ. ಯಾರು ಅರ್ಹರು ಇದ್ದಾರೆ ಅವರಿಗೆ ಬಿಪಿಎಲ್ ಸಿಗುತ್ತೆ. ಯಾರು ಅನರ್ಹರು ಇದ್ದಾರೆ ಅವರಿಗೆ ಸಿಗಲ್ಲ.ಸರ್ಕಾರಿ ನೌಕರರು, ತೆರಿಗೆ ಕಟ್ಟುವವರಿಗೆ ಬಿಪಿಎಲ್ ಕಾರ್ಡ ಕೊಡುವುದು ಸರಿನಾ? ಅಂತವುಗಳನ್ನು ರದ್ದು ಪಡಿಸಿ ಅವರಿಗೆ ಎಪಿಎಲ್ ಕಾರ್ಡ ಕೊಡುತ್ತೇವೆ. ರಾಜ್ಯದಲ್ಲಿ ಎಪಿಎಲ್ ಕಾರ್ಡ ರದ್ದು ಮಾಡಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತರನಾಡಿದ ಅವರು, ಈಗಾಗಲೇ ಆಹಾರ ಇಲಾಖೆ ಅಽಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ, ಅರ್ಹರಿಗೆ ರದ್ದು ಮಾಡದಂತೆ, ಅನರ್ಹರರಿಗೆ ಬಿಪಿಎಲ್ ಬದಲು ಎಪಿಎಲ್ ಕೊಡುವಂತೆ ಹೇಳಿದ್ದೇನೆ. ನೀವು ಪದೇ ಪದೇ ರದ್ದು ರದ್ದು ಎಂದು ಹೇಳಿ ಗೊಂದಲ ಮೂಡಿಸಬೇಡಿ ಎಂದು ಮಾಧ್ಯಮದವರ ವಿರುದ್ಧ ಮತ್ತೊಮ್ಮೆ ಸಿಡಿಮಿಡಿಗೊಂಡರು.

ಕಾರ್ಡ ರದ್ದು ಆಗಿದ್ದಕ್ಕೆ ಗೃಹಲಕ್ಷಿ÷್ಮÃ ಯೋಜನೆಗೂ ಹೋಲಿಕೆ ಮಾಡಬೇಡಿ. ಗೃಹಲಕ್ಷಿ÷್ಮÃ ಯೋಜನೆಗೆ ಬೇರೆ ಮಾನದಂಡಗಳು ಇವೆ. ಯಾರು ತೆರಿಗೆ ಕಟ್ಟುತ್ತಾರೋ ಅವರಿಗೆ ಗೃಹಲಕ್ಷಿ÷್ಮÃ ಯೋಜನೆ ಕೊಡಲ್ಲ ಎಂದು ಸ್ಪಷ್ಟಪಡಿಸಿದರು.