ಹುಬ್ಬಳ್ಳಿ: ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ. ಅ.ಶ್ರೀ. ಆನಂದ ಅವರು ಗುರುವಾರ ಇಲ್ಲಿಯ ಅಮರಗೋಳ ಎಪಿಎಂಸಿಗೆ ಭೇಟಿ ನೀಡಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ ಅವರೊಂದಿಗೆ ವಿವಿಧ ವಿಷಯಗಳ ಕುರಿತು ರ್ಚಚಿಸಿದರು.
ಸಾವಯವ ಪದ್ಧತಿಯಲ್ಲಿ ಬೆಳೆದ ಎಲ್ಲ ವಿಧದ ಬೀಜಗಳನ್ನು ಸಂಸ್ಕರಿಸಿ ಕೃಷಿಕರಿಗೆ ವಿತರಿಸುವ ವ್ಯವಸ್ಥೆಯಾಗಬೇಕಿದೆ. ಅದಕ್ಕಾಗಿ ಬೀಜ ದಾಸ್ತಾನು ವ್ಯವಸ್ಥೆಯನ್ನು ಎಪಿಎಂಸಿಯಲ್ಲಿ ಮಾಡಬೇಕು ಎಂದು ಮನವಿ ಮಾಡಿದರು.
ಸಾವಯವ ಬೀಜ ಸಂಸ್ಕರಣೆ, ಗ್ರೇಡಿಂಗ್, ಪ್ಯಾಕಿಂಗ್ ಇತ್ಯಾದಿ ಕಾರ್ಯ ಕೈಗೊಳ್ಳಲು ಎಪಿಎಂಸಿಯಲ್ಲಿ ಲಭ್ಯ ಇರುವ ಸೌಲಭ್ಯಗಳ ಕುರಿತು ಹಾಗೂ ಗೋದಾಮು ಸವಲತ್ತಿನ ಬಗ್ಗೆ ಅಧ್ಯಕ್ಷ ಸುಡಕೇನವರ ಮಾಹಿತಿ ನೀಡಿದರು. ಪ್ರಾಂಗಣದಲ್ಲಿನ ಪ್ಯಾಕಿಂಗ್ ಘಟಕ ವೀಕ್ಷಣೆಯನ್ನೂ ಮಾಡಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಅರುಣ ವಿ.ಕೆ., ಸಾವಯವ ಕೃಷಿಕರಾದ ಮಂಜುನಾಥ ನಾಗನಗೌಡ್ರ, ಗುರು ಪಾಟೀಲ ಹಾಗೂ ಎಪಿಎಂಸಿ ಸಿಬ್ಬಂದಿ ಉಪಸ್ಥಿತರಿದ್ದರು.