ಜಿಲ್ಲೆ

ಎಪಿಎಂಸಿಗೆ ಶಾಸಕ ಟೆಂಗಿನಕಾಯಿ ಭೇಟಿ, ವರ್ತಕರ ಸಮಸ್ಯೆ ಆಲಿಕೆ

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬುಧವಾರ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ, ಕುಂದುಕೊರತೆಗಳನ್ನು ಆಲಿಸಿದರು.

ವರ್ತಕರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ ನೇತೃತ್ವದಲ್ಲಿ ಎಪಿಎಂಸಿ ಮೂಲ ಸೌಲಭ್ಯಗಳ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಮುಖ್ಯವಾಗಿ ಆಗಬೇಕಾದ ಕಾರ್ಯಗಳ ಕುರಿತು ಮಾಹಿತಿ ಪಡೆದರು. ದಸರಾ ಹಬ್ಬದ ನಂತರ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಜೊತೆಗೆ ಕರೆದುಕೊಂಡು ಸಭೆ ನಡೆಸಿ ಶೀಘ್ರ ಪರಿಹಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಸಂಘದ ಮಾಜಿ ಅಧ್ಯಕ್ಷರಾದ ಗಂಗನಗೌಡ ಪಾಟೀಲ, ರಾಜಶೇಖರ ವಾಲಿ, ಬಸವರಾಜ ಯಕಲಾಸಪುರ, ಸದಸ್ಯರಾದ ಎಂ.ಆರ್. ಮೇಲಗಿರಿ, ಮಲ್ಲಿಕಾರ್ಜುನ ಬೋರಟ್ಟಿ, ಶಂಭುಲಿಂಗಪ್ಪ ಅಂಗಡಿ, ಸಿದ್ದು ಕೊಟ್ಟೂರಶೆಟ್ಟರ್, ಶಿವಯೋಗಿ ಹೊಸಕಟ್ಟಿ, ಪ್ರಕಾಶ ಓಸ್ತವಾಲ, ರುದ್ರಪ್ಪ ಬೆಟಗೇರಿ ಮುಂತಾದವರು ಉಪಸ್ಥಿತರಿದ್ದರು.