ಜಿಲ್ಲೆ

ಎಪಿಎಂಸಿಗೆ 100 ಎಕರೆ ಭೂಮಿ : ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ : ಸಮಾವೇಶದಲ್ಲಿ ಆಶ್ವಾಸನೆಗಳ ಮಹಾಪೂರ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ನರಸಾಪುರದ ಬೆಳ್ಳೂರು ಬಳಿಯ ಬಿಕೆಎಸ್​ ಅಂತರಾಷ್ಟ್ರೀಯ ಯೋಗ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪತಂಜಲಿ ವಿಗ್ರಹ ಹಾಗೂ ಬಿಕೆಎಸ್​ ಅಯ್ಯಂಗಾರ್​ ದಂಪತಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಿಕೆಎಸ್​ ಅಯ್ಯಂಗಾರ್​ ಟ್ರಸ್ಟಿನ ಅಧ್ಯ ಬಿ.ರು, ನರಸಾಪುರ ಸೊಸೈಟಿ ಅಧ್ಯ ಖಾಜಿಕಲ್ಲಳ್ಳಿ, ಮುನಿರಾಜು , ವಕ್ಕಲೇರಿ ಗ್ರಾಪಂ ಅಧ್ಯ ಮುರಳಿ, ಸೂಲೂರು ಗ್ರಾಪಂ ಸದಸ್ಯ ನಾಗಲಾಪುರ ವೀರೇಂದ್ರ ಪಾಟೀಲ್​ ಇದ್ದರು.

ಕೋಲಾರ/ವೇಮಗಲ್​
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ತಕ್ಷಣ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಭೂಮಿ ಮಂಜೂರು ಮಾಡಿಸುತ್ತೇನೆ. ಟೊಮ್ಯಾಟೊ ಮತ್ತು ಮಾವು ಸಂಸ್ಕರಣಾ ಟಕ ಆರಂಭಿಸಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ತಾಲೂಕಿನ ವೇಮಗಲ್​ ಪಟ್ಟಣದ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರೈತ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆ.ಸಿ.ವ್ಯಾಲಿ ಯೋಜನೆಯನ್ನು ಈಡೇರಿಸಿದ್ದೇನೆ. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 3ನೇ ಹಂತದ ಶುದ್ಧೀಕರಣಕ್ಕೆ ಚಾಲನೆ ನೀಡಲಾಗುವುದು ಹಾಗೂ ಸ್ಥಗಿತಗೊಂಡಿರುವ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿ 2 ವರ್ಷದೊಳಗಾಗಿ ಶುದ್ಧ ನೀರು ನೀಡಲಾಗುವುದು ಎಂದರು.
ರೈತ ವಿರೋಧಿ ನೀತಿ ಬಿಡಿ: ಪ್ರಧಾನಿ ಮೋದಿ ಉದ್ದಿಮೆದಾರರ 14 ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದಾರೆ. ಆದರೆ ರೈತರ ಮತ್ತು ಮಹಿಳೆಯರ ಒಂದು ರೂಪಾಯಿ ಸಾಲಮನ್ನಾ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 8,165 ಕೋಟಿ ರೂ. ಸಾಲಮನ್ನಾ ಮಾಡಿತು ಎಂದರು.
ಬಿಜೆಪಿಯವರು ಯಾವತ್ತಿಗೂ ಮಹಿಳೆಯರಿಗೆ ನ್ಯಾಯಯುತ ಹಕ್ಕು ಕೊಡುವ ಪ್ರಯತ್ನ ಮಾಡಿಲ್ಲ. ದೇಶದಲ್ಲಿ ತಾರತಮ್ಯ ಹೋಗಲಾಡಿಸಬೇಕಾದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯಿಲ್ಲದ ಹಿಂದುಳಿದ, ರೈತ, ಮಹಿಳೆಯರಿಗೆ ನ್ಯಾಯ ಕೊಡಬೇಕು. ಭಾರತದಲ್ಲಿ ಶೇ.35 ಮಹಿಳೆಯರು ಮಾತ್ರ ಉದ್ಯೋಗಸ್ಥರು, ವಿದೇಶಗಳಲ್ಲಿ ಶೇ.65ರಷ್ಟು ಇದ್ದಾರೆ. ದೇಶದ ಜಿಡಿಪಿ ಹೆಚ್ಚಾಗಬೇಕಾದರೆ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾಗುತ್ತದೆ. ಕೃಷಿ ಆಧಾರಿತ ಗ್ರಾಮೀಣ ಉದ್ಯೋಗವನ್ನು ಅಭಿವೃದ್ಧಿಪಡಿಸದಿದ್ದರೆ ದೇಶದ ಅಭಿವೃದ್ಧಿ ಅಸಾಧ್ಯ. ಮಹಿಳೆಯರಿಗೆ ಶಕ್ತಿ ಕೊಟ್ಟಾಗ ದೇಶದ ಅಭಿವೃದ್ಧಿಯಾಗುತ್ತದೆ ಎಂದರು.
ಕೇಂದ್ರದ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ಮಾತನಾಡಿ, ಯುಪಿಎ ಸರ್ಕಾರ ಇದ್ದಾಗ ರಾಷ್ಟ್ರದಲ್ಲಿ ಸ್ವಸಹಾಯ ಸಂಗಳ ಅಭಿವೃದ್ಧಿಗೆ ನೇರ ಹಣ ತಲುಪಿಸಲು ಯೋಜನೆ ಮಾಡಲಾಗಿತ್ತು. ಮಹಿಳೆಯರು ಸ್ವಾವಲಂಬಿ ಆಗಲು ಕಾರ್ಯಕ್ರಮ ರೂಪಿಸಲಾಗಿತ್ತು. ಇಂತಹ ಕಾರ್ಯಕ್ರಮಗಳಿಗೆ ಭಾರತದಲ್ಲಿಯೇ ಮೊದಲ ಬಾರಿಗೆ ಬಡ್ಡಿ ಕಟ್ಟಿದ್ದು ಸಿದ್ದರಾಮಯ್ಯ ಸರ್ಕಾರ ಎಂದರು.
ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​, ಶಾಸಕರಾದ ರಮೇಶ್​ಕುಮಾರ್​, ಕೆ.ಶ್ರೀನಿವಾಸಗೌಡ ಕೆ.ವೈ.ನಂಜೇಗೌಡ, ಭೈರತಿ ಸುರೇಶ್​, ಎಂಎಲ್​ಸಿಗಳಾದ ನಸೀರ್​ ಅಹ್ಮದ್​, ಅನಿಲ್​ಕುಮಾರ್​, ಮಾಜಿ ಶಾಸಕರಾದ ಸಂಪಂಗಿ, ಡಾ.ಎಂ.ಸಿ.ಸುಧಾಕರ್​, ಕೋಲಾರ ಜಿಲ್ಲಾ ಉಸ್ತುವಾರಿ ಎಂ.ಆರ್​.ಸೀತಾರಾಂ, ಮಾಜಿ ಸಚಿವರಾದ ಎಚ್​.ಎಂ.ರೇವಣ್ಣ, ಕೆ.ಎ.ನಿಸಾರ್​ ಅಹ್ಮದ್​, ಜಿಲ್ಲಾಧ್ಯಕ್ಷ ಲ್ಮನಾರಾಯಣ್​, ರಾಜ್ಯ ಮಹಿಳಾ ಅಧ್ಯೆ ಪುಷ್ಪಾ ಅಮರನಾಥ್​, ಮುಖಂಡರಾದ ವೇಣುಗೋಪಾಲ್​, ಚಂಜಿಮಲೆ ರಮೇಶ್​, ರತ್ನಮ್ಮ, ರಾಮಚಂದ್ರಪ್ಪ, ಎಲ್​.ಎ.ಮಂಜುನಾಥ್​, ಸವಿತಾ ಮಂಜುನಾಥ್​, ಜಯದೇವ್​, ಊರುಬಾಗಿಲು ಶ್ರೀನಿವಾಸ್​, ಉದಯಕುಮಾರ್​ ಇದ್ದರು.


ಡಿಸಿಸಿ ಬ್ಯಾಂಕ್​ ಅಧ್ಯಕ್ಷರಿಗೆ ಅಭಿನಂದನೆ: ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡರು ಕೆಲವು ದಿನಗಳ ಹಿಂದೆ ನನ್ನ ಬಳಿ ಬಂದು ಕೋಲಾರದಲ್ಲಿ ಸಿಶಕ್ತಿ ಮಹಿಳಾ ಸ್ವಸಹಾಯ ಸಂಗಳ ಸಮಾವೇಶ ಮಾಡುತ್ತಿದ್ದೇನೆ. ನೀವು ಬರಬೇಕೆಂದು ಆಹ್ವಾನ ನೀಡಿದ್ದರು. ಅದರಂತೆ ಅವರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದೇನೆ. ಅವರಿಗೂ ಮತ್ತು ಮಹಿಳೆಯರಿಗೂ ಡಿಸಿಸಿ ಬ್ಯಾಂಕ್​ ನಿರ್ದೇಶಕರಿಗೂ ಧನ್ಯವಾದಗಳನ್ನು ಸಿದ್ದರಾಮಯ್ಯ ತಿಳಿಸಿದರು.


ಕೋಲಾರದಿಂದಲೇ ಸ್ಪರ್ಧಿಸುವೆ:
ನಾನು ಕೋಲಾರದಿಂದಲೇ ಸ್ಪರ್ಧಿಸುತ್ತೇನೆ. ಯಾರ ಅಪಪ್ರಚಾರದ ಮಾತೂ ಕೇಳಬೇಡಿ. ಬಿಜೆಪಿ ಸರ್ಕಾರದ ಸಾಧನೆ ಏನೂ ಇಲ್ಲ. ದ್ವೇಷ ಹುಟ್ಟು ಹಾಕಿ ಹಿಂದು, ಮುಸ್ಲಿಮರನ್ನು ಎತ್ತಿಕಟ್ಟಿದ್ದೇ ಅವರ ದೊಡ್ಡ ಸಾಧನೆ. ಸಬ್​ ಕಾ ಸಾಥ್​ ಸಬ್​ಕಾ ವಿಕಾಸ್​ ಎನ್ನುತ್ತಾರೆ. ಅಲ್ಪಸಂಖ್ಯಾತರು ದಲಿತರು, ಹಿಂದುಳಿದವರು, ಮಹಿಳೆಯರು ಸಬ್​ ಕಾ ಸಾಥ್​ನಲ್ಲಿ ಬರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು 2013ರಿಂದ 18ವರೆಗೂ ನುಡಿದಂತೆ ನಡೆದುಕೊಂಡಿದ್ದೇವೆ, ನಿಮ್ಮ ಪರವಾಗಿದ್ದವರನ್ನು ಅಧಿಕಾರಕ್ಕೆ ತನ್ನಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಮೋದಿ, ಷಾ ನೂರು ಬಾರಿ ಬಂದರೂ ಕಾಂಗ್ರೆಸ್​ ಅಧಿಕಾರಕ್ಕೆ

ರಾಜ್ಯಕ್ಕೆ ಅಮಿತ್​ ಷಾ ಮತ್ತು ನರೇಂದ್ರ ಮೋದಿ 100 ಬಾರಿ ಬಂದು ಹೋದರೂ ಪಕ್ಷಕ್ಕೆ ತೊಂದರೆಯಿಲ್ಲ. ಬಿಜೆಪಿ ತೊಲಗಿಸಬೇಕು ಎಂಬುದು ರಾಜ್ಯದ ಮತದಾರರ ಅಭಿಪ್ರಾಯವಾಗಿದೆ. ಜೆಡಿಎಸ್​ನವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರಲ್ಲ. 2006ರಲ್ಲಿ ಬಿಜೆಪಿಯೊಂದಿಗೆ ಸೇರಿ ಸರ್ಕಾರ ನಡೆಸಿದವರು, ಅವರ ಜಾತ್ಯತಿತತೆ ಎಲ್ಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ವೇಮಗಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತ ವಿರೋಧಿ ಎಂದು ನನ್ನ ವಿರುದ್ಧದ ಅಪಪ್ರಚಾರದ ಹಿಂದೆ ಜೆಡಿಎಸ್​ ಮತ್ತು ಬಿಜೆಪಿ ಷಡ್ಯಂತ್ರವಿದೆ. ನಾನು ದಲಿತರಿಗೆ ಐತಿಹಾಸಿಕವಾಗಿ ಕಾನೂನುಗಳನ್ನು ಜಾರಿಗೆ ತಂದು ಅನೇಕ ಯೋಜನೆಗಳನ್ನು ನೀಡಿದ್ದೇನೆ. ಎಸ್​ಸಿಪಿ ಮತ್ತು ಟಿಪಿಎಸ್​ ಅನುದಾನಗಳನ್ನು ಕೊಡಿಸಿದ್ದೇ ನಾನು ಎಂದರು.
ಟಿಪ್ಪು ಜಯಂತಿಯೊಂದನ್ನೇ ನಾನು ಮಾಡಿಲ್ಲ. ನಮ್ಮ ಸರ್ಕಾರ ಎಲ್ಲ ಮಹನೀಯರ ಜಯಂತಿ ಆಚರಣೆ ಮಾಡಲು ಆದೇಶ ಮಾಡಿತ್ತು. ಅದನ್ನು ಬಿಟ್ಟು ಟಿಪ್ಪು ಜಯಂತಿ ಒಂದೇ ಅವರ ಕಣ್ಣಿಗೆ ಕಾಣಿಸಿದೆ. ಕಾಂಗ್ರೆಸ್​ ನುಡಿದಂತೆ ನಡೆದಿದೆ. ಆದ್ದರಿಂದ ಕಾಂಗ್ರೆಸ್​ ಅನ್ನು ಜನ ಬೆಂಬಲಿಸುತ್ತಿದ್ದಾರೆ. ನಾನು ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ, ಅದು ಮಾಧ್ಯಮದವರ ಸೃಷ್ಟಿ. ಹೈಕಮಾಂಡ್​ ಆದೇಶ ಬೇಕು ಎಂದು ಹೇಳಿದ್ದೇನೆ ಹೊರತು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿಲ್ಲ. ನೀವೇ ಗೊಂದಲ ಸೃಷ್ಟಿಸಿದಿರಿ ಎಂದು ಮಾಧ್ಯಮಗಳ ವಿರುದ್ಧ ಗರಂ ಆದರು.
ಕೋಲಾರದಿಂದ ನಾನೇ ಸ್ಪರ್ಧೆ ಮಾಡಲು ಒಪ್ಪಿರುವಾಗ ವಿರೋಧ ಪಕ್ಷದವರಿಗೆ ಏಕೆ ನನ್ನ ಉಸಾಬರಿ? ಚಾಮುಂಡೇಶ್ವರಿ ೇತ್ರವೇ ಬೇರೆ, ಕೋಲಾರ ೇತ್ರವೇ ಬೇರೆ, ಚಾಮುಂಡೇಶ್ವರಿಯಲ್ಲಿ ಬಿಜೆಪಿ, ಜೆಡಿಎಸ್​ ಹೊಂದಾಣಿಕೆಯಿಂದ ಜೆಡಿಎಸ್​ಗೆ ಬೆಂಬಲ ಸಿಗುವಂತಾಯಿತು. ಕೋಲಾರದಲ್ಲಿ ಆ ರೀತಿ ಇಲ್ಲ, ಇದನ್ನೆಲ್ಲಾ ಸೃಷ್ಟಿ ಮಾಡುತ್ತಿರುವುದು ವಿರೋಧ ಪಕ್ಷದವರು ಎಂದರು.