oppo_2 
ಜಿಲ್ಲೆ

ಎಪಿಎಂಸಿ ಅನಧಿಕೃತ ಅಂಗಡಿ ತೆರವು ಮಾಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿಯ ಎಪಿಎಂಸಿಯಲ್ಲಿನ ಅನಧಿಕೃತ ಅಂಗಡಿ ತೆರವುಗೊಳಿಸಲು ನಿರಂತರ ಹೋರಾಟ ನಡೆಯುತ್ತಿದ್ದು, ಜೂ.೨೦ರಂಂದು ಎಲ್ಲ ಸಂಘಟನೆಗಳು ಸೇರಿ ಡಿಸಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಕಲ್ಯಾಣ ರ‍್ನಾಟಕ ಹಿಂದು ಜಾಗೃತಿ ಸೇನೆ ವಿಭಾಗೀಯ ಅಧ್ಯಕ್ಷ ಲಕ್ಷಿ$್ಮಕಾಂತ ಸ್ವಾದಿ ತಿಳಿಸಿದರು.

೧೦೩ ಅನಧಿಕೃತ ಅನಧಿಕೃತ ಅಂಗಡಿಗಳ ತೆರವಿಗೆ ನೋಟಿಸ್​ ನೀಡಲಾಗಿದೆ. ಆದರೆ ಎಪಿಎಂಸಿಯವರು ತೆರವು ಮಾಡಲು ಮುಂದಾಗುತ್ತಿಲ್ಲ. ಜಿಲ್ಲಾಡಳಿತದಿಂದ ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಕಲ್ಯಾಣ ರ‍್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್​.ಪಾಟೀಲ್​ ನರಿಬೋಳ ಸೇರಿ ಹಲವು ಮುಖಂಡರ ನಾಯಕತ್ವದಲ್ಲಿ ೨೩ ದಿನದಿಂದ ಧರಣಿ ನಡೆಯುತ್ತಿದೆ. ಆದರೆ, ಎಪಿಎಂಸಿ ಕರ‍್ಯರ‍್ಶಿ, ಜಿಲ್ಲಾಡಳಿತ ನಿದ್ದೆಗಣ್ಣಲ್ಲಿ ಇರುವಂತೆ ರ‍್ತಿಸುತ್ತಿದೆ. ರ‍್ನಿಲಕ್ಷ್ಯದ ದೋರಣೆಗೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿಯಲ್ಲಿ ಕೃಷಿ ಮಾರುಕಟ್ಟೆ ಕಾಯಿದೆ ಪ್ರಕಾರ ವ್ಯವಹಾರ ನಡೆಯುತ್ತಿಲ್ಲ. ಅಲ್ಲಿ ಬರೀ ಅನಧಿಕೃತ ವ್ಯವಹಾರಗಳೇ ನಡೆಯುತ್ತಿವೆ. ಉಸ್ತುವಾರಿ ಸಚಿವರು ರಾಜಸ್ಥಾನಿ ಅಂಗಡಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಬೇಕು. ಸ್ವತಂ ಎಪಿಎಂಸಿ ಸಚಿವರೇ ಸ್ಪಷ್ಟ ಆದೇಶ ನೀಡಿದ್ದರೂ ಸಹ ತೆರವಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಶ್ರೀಮಂತ ವ್ಯಾಪಾರಿಗಳ ಲಾಭಿಗೆ ಮಣಿದು, ತೆರವು ತಡೆದಿದ್ದಾರೆ ಎಂದು ಕಿಡಿ ಕಾರಿದರು.

ಮಹೇಶ ಕೆಂಭಾವಿ, ನಾಗೇಂದ್ರಪ್ಪ ಥಂಬೆ, ಸಿದ್ದು ಕಂದಕಲ್​ ಮಲ್ಲಿಕರ‍್ಜುನ ಚಿಂಚನಸೂರ, ಪೃಥ್ವಿರಾಜ ರಾಂಪುರ ಇತರರಿದ್ದರು.