ಜಿಲ್ಲೆ

ಎನ್​ಎಚ್​ &275ರಲ್ಲಿ ಹೆಲಿಪ್ಯಾಡ್​ ನಿರ್ಮಾಣಕ್ಕೆ ಸಿದ್ಧತೆ : ತುರ್ತು ಸಂದರ್ಭ, ಗಣ್ಯರ ಬಳಕೆಗೆ ಅನುಕೂಲ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಿದ್ಧತೆ

ಗಂಗಾಧರ್​ ಬೈರಾಪಟ್ಟಣ ರಾಮನಗರ

ಬೆಂಗಳೂರು&ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗುತ್ತಿರುವ ಎನ್​ಎಚ್​ &275ರ ವೈಶಿಷ್ಟ$್ಯತೆಗೆ ಮತ್ತೊಂದು ಗರಿ ಸೇರ್ಪಡೆ ಆಗಲಿದೆ. ತುರ್ತು ಸಂದರ್ಭ ಹಾಗೂ ಗಣ್ಯರ ಬಳಕೆಗೆ ಅನುಕೂಲವಾಗುವಂತೆ ಹೆದ್ದಾರಿಯಲ್ಲಿ ಹೆಲಿಪ್ಯಾಡ್​ ನಿರ್ಮಾಣವಾಗಲಿದ್ದು, ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ.

ಬೆಂಗಳೂರು ಹೊರವಲಯದ ನೈಸ್​ ಜಂನ್​ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂನ್​ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 118 ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ನಿರ್ಮಾಣ ಆಗುತ್ತಿದೆ. ಇದರ ನಡುವೆ ತುರ್ತು ಬಳಕೆಗೆ ಅನುಕೂಲವಾಗುವಂತೆ ಹೆಲಿಪ್ಯಾಡ್​ ನಿರ್ಮಾಣಕ್ಕೆ ಬೇಡಿಕೆ ಇಡಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ ಕೋರಿಕೆ ಇಟ್ಟ ಮೂರು ಹೆಲಿಪ್ಯಾಡ್​ನಲ್ಲಿ ಒಂದಕ್ಕೆ ಅನುಮತಿ ನೀಡಿದ್ದು, ಇದು ರಾಮನಗರದ ಬಳಿಯೇ ನಿರ್ಮಾಣವಾಗಲಿದೆ. ಇದರೊಂದಿಗೆ ಹೆದ್ದಾರಿ ವೈಶಿಷ್ಟ$್ಯ ಮತ್ತಷ್ಟು ಹೆಚ್ಚಲಿದೆ ಎಂದು ಮೈಸೂರು&ಕೊಡಗು ಲೋಕಸಭೆ ಕ್ಷೇತ್ರದ ಸಂಸದ ಪ್ರತಾಪ ಸಿಂಹ ತಿಳಿಸಿದರು.

ದಸರೆಗೆ ಹೆದ್ದಾರಿ ಮುಕ್ತ: ಮೂರು ವರ್ಷಗಳ ಹಿಂದೆ ಆರಂಭಗೊಂಡ ಬೆಂಗಳೂರು ಮತ್ತು ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ರ 10 ಲೇನ್​ಗಳ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಮೈಸೂರು ದಸರಾ ವೇಳೆಗೆ ಪ್ರಯಾಣಿಕರ ಬಳಕೆಗೆ ಸಂಪೂರ್ಣ ಮುಕ್ತವಾಗಲಿದೆ. ಈ ವೇಳೆ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವುದಿಲ್ಲವಾದರೂ, ಪ್ರಯಾಣಿಕರ ಬಳಕೆಗೆ ಅಡತಡೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ದಸರಾ ವೇಳೆಗೆ ಎರಡೂ ಹಂತದ ಹೆದ್ದಾರಿಯನ್ನು ಪ್ರಯಾಣಿಕರ ಬಳಕೆಗೆ ಮುಕ್ತ ಮಾಡಿ, ಉಳಿಯುವ ಸಣ್ಣ&ಪುಟ್ಟ ಕಾಮಗಾರಿಗಳನ್ನು ಈ ವರ್ಷದ ಡಿಸೆಂಬರ್​ ಅಂತ್ಯಕ್ಕೆ ಪೂರ್ಣಗೊಳಿಸಲಾಗುತ್ತದೆ ಎನ್ನುತ್ತಾರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.

16 ಕಡೆ ಎಂಟ್ರಿ ಎಕ್ಸಿಟ್​ಗಳ ನಿರ್ಮಾಣ: ಬೆಂಗಳೂರಿನಿಂದ ಮೈಸೂರಿನವರೆಗೂ ಎಕ್ಸ್​ಪ್ರೆಸ್​ ವೇನಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಸೇರಿ ಎಲ್ಲಿಯೂ ಎಂಟ್ರಿ, ಎಕ್ಸಿಟ್​ಗಳಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನಿಂದ ನೇರವಾಗಿ ಮೈಸೂರಿನಲ್ಲೇ ಇಳಿಯಬೇಕು. ಈ ನಡುವಿನ ನಗರಗಳಿಂದ ಬೈಪಾಸ್​ ಮೂಲಕವೇ ಬೆಂಗಳೂರು ಇಲ್ಲವೇ ಮೈಸೂರು ತಲುಪಬೇಕು. ಇದರೊಂದಿಗೆ ಕೆಲವೆಡೆ ೆನ್ಸಿಂಗ್​ ಅಳವಡಿಸಲು ಸ್ಥಳಿಯರು ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಹೆದ್ದಾರಿಯಲ್ಲಿ ಪೂರ್ಣವಾಗಿ 16 ಕಡೆಗಳಲ್ಲಿ ಎಂಟ್ರಿ, ಎಕ್ಸಿಟ್​ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಎರಡೂ ಮಹಾನಗರಗಳ ನಡುವಿನ ನಗರಗಳ ಜನತೆ ನಿರಾಳರಾಗುವಂತೆ ಮಾಡಿದೆ. ಇದರ ಜತೆಗೆ ಒಟ್ಟು 90 ಕಡೆಗಳಲ್ಲಿಯೂ ಸಹ ನಿಲ್ದಾಣಗಳ ನಿರ್ಮಾಣ ಕಾರ್ಯವೂ ನಡೆಯಲಿದೆ.

ಏನಿದು ಕಾಮಗಾರಿ?: ಈ ಕಾಮಗಾರಿ ಮುಗಿದಲ್ಲಿ ಬೆಂಗಳೂರು&ಮೈಸೂರು ನಡುವಿನ ಪ್ರಯಾಣ ಈಗಿರುವ 3 ಗಂಟೆಗೆ ಬದಲಾಗಿ 90 ನಿಮಿಷಕ್ಕೆ ಇಳಿಯಲಿದೆ. ಮಧ್ಯಪ್ರದೇಶ ಮೂಲದ ದಿಲೀಪ್​ ಬಿಲ್ಡಾ$್ಕನ್​ ಕಂಪನಿ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿದೆ. 2019ರಿಂದ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದೆ. ಬೆಂಗಳೂರು&ಮೈಸೂರು ಹೆದ್ದಾರಿ ಹಳೆಯ ನಾಲ್ಕು ಪಥದ ರಸ್ತೆ ಸುಮಾರು 25ರಿಂದ 30ಮೀಟರ್​ ಅಗಲ ಇದ್ದು, ಇದನ್ನು 60 ಮೀಟರ್​ ಹಾಗೂ ಎಲಿವೇಟೆಡ್​ ಕಾರಿಡಾರ್​ ಬಳಿ 45 ಮೀಟರ್​ಗೆ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರು&ಮೈಸೂರು ನಡುವೆ ಸದ್ಯ 135 ಕಿಲೋಮೀಟರ್​ ಅಂತರವಿದೆ. ಇದರಲ್ಲಿ ಬೆಂಗಳೂರು ಹೊರವಲಯದ ನೈಸ್​ ಜಂನ್​ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂನ್​ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 118 ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ನಿರ್ಮಾಣ ಆಗುತ್ತಿದೆ. 6 ಎಕ್ಸ್​ಪ್ರೆಸ್​ ಲೇನ್​, 4 ಸರ್ವಿಸ್​ ಲೇನ್​ ನಿರ್ಮಾಣ ಹಂತದಲ್ಲಿದೆ. 8 ಕಿ.ಮೀ ಉದ್ದ ಎಲಿವೇಟೆಡ್​ ಕಾರಿಡಾರ್​, 9 ಪ್ರಮುಖ ಸೇತುವೆಗಳು, 42 ಕಿರು ಸೇತುವೆಗಳು, 64 ಅಂಡರ್​ ಪಾಸ್​, 11 ಓವರ್​ ಪಾಸ್​ಗಳು, 4 ರೋಡ್​ ಓವರ್​ ಬ್ರಿಡ್ಜ್​, 5 ಬೈಪಾಸ್​ ಬರಲಿವೆ.

ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಹಾಗೂ ಗಣ್ಯರ ಓಡಾಟಕ್ಕೆ ಅನುಕೂಲವಾಗುವಂತೆ ಹೆದ್ದಾರಿಯಲ್ಲಿ ಹೆಲಿ ಪ್ಯಾಡ್​ಗಳ ನಿರ್ಮಾಣಕ್ಕೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಒಂದು ಹೆಲಿಪ್ಯಾಡ್​ ರಾಮನಗರ ಬಳಿಯೇ ನಿರ್ಮಾಣವಾಗಲಿದೆ. ಪ್ರತಾಪ್​ಸಿಂಹ, ಸಂಸದ, ಮೈಸೂರು&ಕೊಡಗು ಕ್ಷೇತ್ರ ಸಣ್ಣ&ಪುಟ್ಟ ಕೆಲಸಗಳ ಬಾಕಿ ಹೊರತಾಗಿ ದಸರಾ ವೇಳೆಗೆ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತವಾಗುವ ವಿಶ್ವಾಸವಿದೆ. ಆದರೆ ಡಿಸೆಂಬರ್​ ಅಂತ್ಯಕ್ಕೆ ಪೂರ್ಣವಾಗಿ ಲಭ್ಯವಾಗಲಿದೆ.ಈಗಾಗಲೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ನಡೆಯುತ್ತಿದೆ. ಶ್ರೀಧರ್​, ಪಿಡಿ