ಜಿಲ್ಲೆ

ಎನ್​ಡಿಎಯಿಂದ ಗೋ&ಬ್ಯಾಕ್​ ಸಿಎಂ ಚಳವಳಿ

3 ಸಾವಿರ ಕಾರ್ಯಕರ್ತರು ಭಾಗಿ, ಶಾಸಕ ಎಂ.ಟಿ.ಕೃಷ್ಣಪ್ಪ ಮಾಹಿತಿ

ತುರುವೇಕೆರೆ: ಸಿಎಂ ಸಿದ್ದರಾಮಯ್ಯ ಅವರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಿದ್ದು, ಅವರ ಮಲತಾಯಿ ಧೋರಣೆ ಖಂಡಿಸಿ, ಡಿ.2ರಂದು ಸಿಎಂ ತುಮಕೂರು ಆಗಮನ ವಿರೋಧಿಸಿ ಗೋ&ಬ್ಯಾಕ್​ ಸಿದ್ದರಾಮಯ್ಯ ಚಳವಳಿ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಿಂದ 3 ಸಾವಿರ ಎನ್​ಡಿಎ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್​ ಶಾಸಕರಿರುವ ಕ್ಷೇತ್ರಕ್ಕೆ ಕೋಟಿಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಬಿಜೆಪಿ ಮತ್ತು ಜೆಡಿಎಸ್​ ಶಾಸಕರ ಕ್ಷೇತ್ರಕ್ಕೆ ಒಂದೇಒಂದು ರೂಪಾಯಿ ಅನುದಾನ ನೀಡುತ್ತಿಲ್ಲ. ಇದು ಅನ್ಯಾಯವಲ್ಲವೇ? ನಾವೂ ಸಹ ಕಾಂಗ್ರೆಸ್​ ಶಾಸಕರ ರೀತಿ ಶಾಸಕರೇ ತಾನೇ? ನಾವೇನೂ ವಿದೇಶದಿಂದ ಬಂದಿದ್ದೀವಾ? ಜನರು ಕಟ್ಟುವ ತೆರಿಗೆಯ ಹಣವೇ ಅಲ್ಲವೇ, ಇವರೇನು ಸ್ವಂತ ಮನೆಯಿಂದ ಅನುದಾನ ಕೊಡ್ತಾರಾ? ಹಾಗಿದ್ದರೂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಏಕೆ ಎಂದು ಎಂ.ಟಿ.ಕೃಷ್ಣಪ್ಪ ಪ್ರಶ್ನಿಸಿದರು. ಅನುದಾನ ಹಂಚಿಕೆ ತಾರತಮ್ಯದಿಂದ ನಮ್ಮ ಕ್ಷೇತ್ರದ ಜನರಿಗೆ ನಾವು ಏನು ಉತ್ತರ ಕೊಡಬೇಕು?. ತಾಲೂಕಿನಲ್ಲಿರುವ ಎಲ್ಲ ರಸ್ತೆಗಳು ಗುಂಡಿ ಬಿದ್ದಿವೆ. ಪ್ರತಿದಿನ ಜನ ಗಲಾಟೆ ಮಾಡ್ತಾರೆ. ಒಂದು ಗುಂಡಿ ಮುಚ್ಚಿಸಲೂ ಈ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಕೂಗಾಡುತ್ತಿದ್ದಾರೆ. ನನಗೂ ಜನರಿಗೆ ಉತ್ತರ ಕೊಟ್ಟೂಕೊಟ್ಟೂ ಸಾಕಾಗಿದೆ. ಈ ಕೆಟ್ಟ ಸರ್ಕಾರದಲ್ಲಿ ಅಭಿವೃದ್ಧಿ ಕನಸಿನ ಮಾತು. ಸಿಎಂ ಸಿದ್ದರಾಮಯ್ಯ ಅವರ ಮಲತಾಯಿ ಧೋರಣೆ ಖಂಡಿಸಿ ಜಿಲ್ಲೆಯ ಜೆಡಿಎಸ್​ ಮತ್ತು ಬಿಜೆಪಿ ಶಾಸಕರ ೇತ್ರದಿಂದ ಸಹಸ್ರಾರು ಮಂದಿ ಕಪು$್ಪಪಟ್ಟಿ ಧರಿಸಿ ಗೋ&ಬ್ಯಾಕ್​ ಸಿದ್ದರಾಮಯ್ಯ ಚಳವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೃಷ್ಣಪ್ಪ ತಿಳಿಸಿದರು. ತಾಲೂಕು ಜೆಡಿಎಸ್​ ಅಧ್ಯಕ್ಷ ಸಾದರಹಳ್ಳಿ ದೊಡ್ಡೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲೀಲಾವತಿ ಗಿಡ್ಡಯ್ಯ, ಮುಖಂಡರಾದ ಹಿಂಡುಮಾರನಹಳ್ಳಿ ನಾಗರಾಜ್​, ಪುರ ಗಂಗಾಧರ್​, ಪಪಂ ಸದಸ್ಯ ಎನ್​.ಆರ್​.ಸುರೇಶ್​, ಎಪಿಎಂಸಿ ಮಾಜಿ ಅಧ್ಯಕ್ಷ ಭೈತರಹೊಸಳ್ಳಿ ರಾಮಚಂದ್ರು, ಕೊಡಿಗೇಹಳ್ಳಿ ಗ್ರಾಪಂ ಸದಸ್ಯ ಹೊಸಹಳ್ಳಿ ದೇವರಾಜ್​, ಬಿಜೆಪಿ ಮುಖಂಡರಾದ ದುಂಡ ಸುರೇಶ್​, ಸೋಮಣ್ಣ ಇದ್ದರು.