ಸುಂಟಿಕೊಪ್ಪ ಸರ್ಕಾರಿ ಪ್ರೌಢ ಹಾಗೂ ಮಾದರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಹಾಜರಿದ್ದರು. ಶಾಂತಿಲಾಯ್, ರಫೀಕ್‌ಖಾನ್, ಬಾಲಕೃಷ್ಣ, ಗೀತಾ, ರಹೆನಾ ಸುಲ್ತಾನ್, ಪ್ರಕಾಶ್ ಇದ್ದರು. 
ಜಿಲ್ಲೆ

ಎನ್‌ಡಿಆರ್‌ಎಫ್‌ನಿಂದ ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ

ಅಭಿನಯ್ ಎಚ್.ಎಂ

ಸುಂಟಿಕೊಪ್ಪ: ವಿಪತ್ತು ಸಂಭವಿಸಿದ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ವತಿಯಿಂದ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು.

ಇಲ್ಲಿನ ಸರ್ಕಾರಿ ಪ್ರೌಢ ಹಾಗೂ ಮಾದರಿ ಶಾಲೆ ಆವರಣದಕಲ್ಲಿ ಶನಿವಾರ ವಿವಿಧ ಆಯಾಗಳನ್ನು ಪ್ರಸ್ತುತ ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಪಡಿಸಲಾಯಿತು.

ಪ್ರವಾಹ, ಭೂಕುಸಿತ, ನೆರೆ, ಕಟ್ಟಡ ಕುಸಿತ ಸಂಭವಿಸಿದಾಗ ಪ್ರಾಣಹಾನಿ ಅನಾಹುತ ತಪ್ಪಿಸಲು ನಿಟ್ಟಿನಲ್ಲಿ ತಂಡ ಕಾಯೋನ್ಮುಖ ವಾಗುವ ಕುರಿತು ಮಾಹಿತಿ ನೀಡಲಾಯಿತು. ಮಕ್ಕಳು ಆಟವಾಡುವಾಗ ಸಣ್ಣ-ಪುಟ್ಟ ಗಾಯವಾದರೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆಯೂ ಎನ್‌ಡಿಆರ್‌ಎಫ್‌ನ ವಿಜಯವಾಡ ತಂಡದ ಇನ್‌ಸ್ಪೆಕ್ಟರ್ ಶಾಂತಿಲಾಯ್ ಹಲವು ಉಪಯುಕ್ತ ಮಾಹಿತಿ ನೀಡಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ರಫೀಕ್‌ಖಾನ್, ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲ ಬಾಲಕೃಷ್ಣ, ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಗ್ರಾಪಂ ಮಾಜಿ ಸದಸ್ಯೆ ರಹೆನಾ ಸುಲ್ತಾನ್, ಪ್ರೌಢಶಾಲೆ ಶಿಕ್ಷಕ ಪ್ರಕಾಶ್ ಇತರರಿದ್ದರು.