ಬಾಗಲಕೋಟೆ: ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸಮಾಜಮುಖಿಯಾಗಿ ಬೆಳೆಯುವಂತೆ ಮಾಡುತ್ತದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೆಶಕ ಪಿ.ಎನ್.ಪಾಟೀಲ ಹೇಳಿದರು.
ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ಬಿವಿವಿ ಸಂಘದ ವಿದ್ಯಾಗಿರಿಯ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಿಂದ ಗುರುವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದ ಪಾಠ ಎನ್‌ಎಸ್‌ಎಸ್ ಶಿಬಿರ ಕಲಿಸುತ್ತದೆ. ಸಮಾಜಕ್ಕೆ ತಮ್ಮನ್ನ ಅರ್ಪಿಸಿಕೊಳ್ಳುವಂತೆ ಮಾಡುತ್ತದೆ. ಶ್ರಮದಾನ, ಸಾಮಾಜಿಕ ಸಂಪರ್ಕ, ವಿಶೇಷ ಕೌಶಲ, ಅಭಿವ್ಯಕ್ತಿ, ನಾಯಕತ್ವದ ಗುಣ ಬೆಳೆಸುತ್ತದೆ ಎಂದರು.
ಬಸವೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಟಿ.ಬಿ ಕೋರಿಶೆಟ್ಟಿ ಮಾತನಾಡಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿ ಮೂಡಿ ಬಂದಿದೆ. ಮಹಾತ್ಮ ಗಾಂಧೀಜಿಯವರು ಕಂಡಿದ್ದ ರಾಮ ರಾಜ್ಯದ ಕನಸನ್ನ ಸಾಕಾರಗೊಳಿಸಲು ಹುಟ್ಟಿಕೊಂಡ ಮಹತ್ವಾಕಾಂಕ್ಷೆಯ ಯೋಜನೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎಚ್.ವಟವಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನೋಡಲ ಅಧಿಕಾರಿ ಡಾ.ಮಾರುತಿ ಎ ಪಾಟೋಳಿ, ಎನ್‌ಎಸ್‌ಎಸ್ ಶಿಬಿರ ಅಽಕಾರಿ ಎಸ್.ಎಸ್.ಅಥಣಿ, ಅನ್ನಪೂರ್ಣ ಹದ್ಲಿ, ಹನುಮಂತ ಪತ್ತಾರ ಇತರರು ಉಪಸ್ಥಿತರಿದ್ದರು. ಭೂಮಿಕಾ ಪ್ರಾರ್ಥಿಸಿದರು. ಎಂ.ಎಸ್.ಕಟಗೇರಿ ಸ್ವಾಗತಿಸಿದರು. ಲಂಕೇಶ ಪೂಜಾರಿ ವಂದಿಸಿದರು. ಸೋಹಲ್ ಸೌದಾಗರ ನಿರೂಪಿಸಿದರು.