ಜಿಲ್ಲೆ

ಎನ್‌ಎಸ್‌ಎಸ್ ವಿಶೇಷ ಶಿಬಿರ ಯಶಸ್ವಿ

ಕಲಬುರಗಿ: ವಿಶ್ವವಿದ್ಯಾಲಯ ಮಟ್ಟದ ಅಂತರ ಮಹಾವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಗುಲ್ಬರ್ಗ ವಿವಿ ಒಳಗಾಂಗಣ ಕ್ರೀಡಾಂಗಣ ಪಕ್ಕದಲ್ಲಿ ಆರು ದಿನಗಳಿಂದ ನಡೆದಿದ್ದು, ಶುಕ್ರವಾರ ಸಮಾರೋಪಗೊಳ್ಳಲಿದೆ.

ವಿವಿ ವ್ಯಾಪ್ತಿಯ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ೧೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದು, ಎಂಟು ಅಧಿಕಾರಿಗಳ ತಂಡ ಮಾರ್ಗದರ್ಶನ ಮಾಡುತ್ತಿದೆ. ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಒಟ್ಟು ವಿದ್ಯಾರ್ಥಿಗಳಲ್ಲಿ ಐದು ತಂಡ ರಚಿಸಲಾಗಿದೆ. ಈ ಪೈಕಿ ತುಂಗಭದ್ರಾ, ಕೃಷ್ಣಾ, ಕಾವೇರಿ, ಕಾರಂಜಾ, ಭೀಮಾ ಸೇರಿವೆ. ನಿತ್ಯ ಬೆಳಗ್ಗೆ ಧ್ವಜಾರೋಹಣ, ಯೋಗ ತರಬೇತಿ, ಉಪಾಹಾರ, ಶ್ರಮದಾನ, ಊಟದ ನಂತರ ಉಪನ್ಯಾಸ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ.

ರಾಷ್ಟ್ರೀಯ ಏಕತಾ ದಿನಕ್ಕೆ ಕಲ್ಯಾಣ ಕರ್ನಾಟಕದ ಸ್ವಾತಂತ್ರÈ ಹೋರಾಟಗಾರರ ಕೊಡುಗೆ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ, ವೈಜ್ಞಾನಿಕ ಮನೋಭಾವ ಮತ್ತು ಭಾರತದ ಸಂವಿಧಾನ ಕುರಿತು ವಿವಿ ಕಾನೂನು ವಿಭಾಗದ ಡೀನ್ ಡಾ.ದೇವಿದಾಸ ಮಾಲೆ, ಡಿಜಿಟಲ್ ಜಗತ್ತಿನಲ್ಲಿ ವ್ಯಕ್ತಿತ್ವ ಅಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಕೌಶಲ ಕುರಿತು ವಿವಿ ಗ್ರಂಥಪಾಲಕ ಡಾ.ಸುರೇಶ ಜಂಗೆ, ಡಿಜಿಟಲ್ ಪ್ರಪಂಚದಲ್ಲಿ ಭಾರತೀಯ ಜನಸಂಖ್ಯಾ ಶಾಸ್ತçದ ವಿಕೃತ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಎ.ಜಿ. ಖಾನ್ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಎನ್‌ಎಸ್‌ಎಸ್ ಸಂಯೋಜಕ ಡಾ.ಎನ್.ಜಿ.ಕಣ್ಣೂರ ಉಪನ್ಯಾಸ ನೀಡಿದ್ದಾರೆ.

ವಿವಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ೧೧ಕ್ಕೆ ನಡೆಯುವ ಸಮಾರೋಪದಲ್ಲಿ ಕುಲಸಚಿವ ಡಾ.ಬಿ.ಶರಣಪ್ಪ ಮುಖ್ಯ ಅತಿಥಿಯಾಗಿದ್ದು, ಕುಲಸಚಿವ ಮೌಲ್ಯಮಾಪನ ಡಾ.ಜ್ಯೋತಿ ಧಮ್ಮಪ್ರಕಾಶ, ವಿತ್ತಾಧಿಕಾರಿ ಪ್ರೊ.ರಾಜನಾಳಕರ್ ಲಕ್ಷö್ಮಣ ಅತಿಥಿಗಳಾಗಿರುವರು. ಡಾ.ಎನ್.ಜಿ. ಕಣ್ಣೂರ ಅಧ್ಯಕ್ಷತೆ ವಹಿಸುವರು. ಒಂದು ವಾರದ ವಿಶೇಷ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ.
ವಿವಿಯಲ್ಲಿ ಗುರುವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಎನ್.ಜಿ. ಕಣ್ಣೂರ, ಡಾ.ಪಂಡಿತ, ಡಾ.ಶಂಕರ ಕಲಬುರಗಿ, ಡಾ.ಮಮಶೆಟ್ಟಿ, ಡಾ.ದಿಲೀಪ ಮಾಲೆ, ಡಾ.ಮಂಜುನಾಥ, ಡಾ.ವಸಂತ, ಜಾನಕಿಬಾಯಿ ಇತರರಿದ್ದರು.