ಬೈಲಹೊಂಗಲದಲ್ಲಿ ಎಬಿವಿಪಿ ಕಾರ್ಯಕರ್ತರು ಎನ್‌ಇಪಿ ರದ್ದು ಖಂಡಿಸಿ ಪ್ರತಿಭಟಿಸಿದರು. ಗಂಗಾಧರ ಧರೆಪ್ಪಗೋಳ, ಅಪ್ಪಣ್ಣ ಹಡಪದ, ಮಹಾಂತೇಶ ಹಂಪಿಹೋಳಿ, ಸೋನಾ ಅಬ್ಬಾಯಿ, ಭರತ ಹುಲಮನಿ, ಶ್ರೀಕಾಂತ ಗೊರವನಹಳ್ಳಿ, ಸುಷ್ಮಾ ಮೂಗಿ, ಗಜಾನಂದ ಮದಲಬಾವಿ, ರಂಜಿತಾ ಹತ್ತಿ ಇತರರಿದ್ದರು. 
ಜಿಲ್ಲೆ

ಎನ್‌ಇಪಿ ರದ್ದು ಖಂಡಿಸಿ ಪ್ರತಿಭಟನೆ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ರಾಜ್ಯ ಸರ್ಕಾರ ಎನ್‌ಇಪಿ ರದ್ದು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಕತ್ತಲೆಗೆ ನೂಕುತ್ತಿದೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಗುರುವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿರುವುದು ರಾಜ್ಯದ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಎನ್‌ಇಪಿ ಕುರಿತು ತಜ್ಞರೊಂದಿಗೆ ಚರ್ಚಿಸದೆ ಯೋಜನೆ ರದ್ದು ಮಾಡುವುದು ತಪ್ಪು. ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಸ್ವಾರ್ಥ ರಾಜಕಾರಣ ಮಾಡಬಾರದು ಎಂದು ಒತ್ತಾಯಿಸಿದರು.

ನೂರಾರು ಕಾರ್ಯಕರ್ತರು ಚನ್ನಮ್ಮ ಸಮಾಧಿಯಿಂದ ಮೆರವಣಿಗೆ ಪ್ರಾರಂಭಿಸಿ ರಾಯಣ್ಣ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಎಸಿ ಕಚೇರಿ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು. ಗಂಗಾಧರ ಧರೆಪ್ಪಗೋಳ, ಅಪ್ಪಣ್ಣ ಹಡಪದ, ಮಹಾಂತೇಶ ಹಂಪಿಹೋಳಿ, ಸೋನಾ ಅಬ್ಬಾಯಿ, ಭರತ ಹುಲಮನಿ, ಶ್ರೀಕಾಂತ ಗೊರವನಹಳ್ಳಿ, ಸುಷ್ಮಾ ಮೂಗಿ, ಗಜಾನಂದ ಮದಲಬಾವಿ ಇತರರು ಇದ್ದರು.