ಕುಶಾಲನಗರ: ಎಚ್.ಡಿ.ಕೋಟೆ ಸಮೀಪದ ಸರಗೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ 39ನೇ ವರ್ಷದ ಫೌಂಡೇಶನ್ ದಿನಾಚರಣೆಯಲ್ಲಿ ಸೋಮವಾರಪೇಟೆ ತಾಲೂಕಿನ ಸೂಪರ್‌ವೈಸರ್ ಎನ್.ಸಿ.ಸುನೀತಾ ಅವರಿಗೆ ಗೋಲ್ಡ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಎನ್.ಸಿ.ಸುನೀತಾ ಅವರು ರಿಸರ್ಚ್ ಚೈಲ್ಡ್ ಹೆಲ್ತ್ ಕೇರ್ ವಿಭಾಗದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು, 46 ಕುರುಬರ ಹಾಡಿಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇಂತಹ ಹಾಡಿಗಳ ಅಂಗವಿಕಲರನ್ನು ಗುರುತಿಸಿ ಮುಖ್ಯವಾಹಿನಿ ತರುವುದು, ಬಾಲ್ಯವಿವಾಹ ತಡೆಗಟ್ಟುವುದು, ಹಾಡಿಗಳಲ್ಲಿ ಇರುವ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ವಹಿಸುವುದು, ಸರ್ಕಾರದ ಸೌಲಭ್ಯಗಳನ್ನು ಕೊಡಿಸುವಲ್ಲಿ ಇವರ ಪ್ರಾಮಾಣಿಕತೆ, ಸೇವಾ ಮನೋಭಾವ ಗುರುತಿಸಿ ಈ ಅವಾರ್ಡ್ ನೀಡಲಾಗಿದೆ.