ಜಿಲ್ಲೆ

ಎನ್.ಎಸ್.ಎಸ್.ಕೆ. ಹಂಗಾಮು ಮುಕ್ತಾಯ 11ಕ್ಕೆ

ಬೀದರ್: ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಮಾರ್ಚ್ 11ಕ್ಕೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಯಾವುದೇ ಸದಸ್ಯರು, ಸದಸ್ಯೇತರ ರೈತರ ಕಬ್ಬು ನುರಿಕೆಗೆ ಬಾಕಿ ಇದ್ದಲ್ಲಿ ಕಾರ್ಖಾನೆಯ ವಿಭಾಗೀಯ ಕಚೇರಿಗೆ ಭೇಟಿ ಕೊಟ್ಟು, ಕಟಾವು ಆದೇಶ ಪಡೆದು, ಕಟಾವು ಮಾಡಿ ನಿಗದಿತ ದಿನಾಂಕದೊಳಗೆ ಕಾರ್ಖಾನೆಗೆ ಸಾಗಿಸಬೇಕು ಎಂದು ಹೇಳಿದ್ದಾರೆ.
ಮಾರ್ಚ್ 11 ರ ನಂತರ ಉಳಿಯುವ ಸದಸ್ಯ ರೈತರ ಕಬ್ಬಿಗೆ ಕಾರ್ಖಾನೆ ಜವಾಬ್ದಾರ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.
2022-23 ರ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸಿ ಸಹಕರಿಸಿದ ರೈತರಿಗೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ ಕೃತಜ್ಞತೆ ತಿಳಿಸಿದ್ದಾರೆ.