ಬಾಗಲಕೋಟೆ ವಿದ್ಯಾಗಿರಿಯ ಜ್ಯೋತಿ ಕಾಲನಿ ಬಳಿ ಪಾನ್ಶಾಪ್ ಹೊಂದಿರುವ ರಾಜು ಶೆಲ್ಲಿಕೇರಿ ಶನಿವಾರ ರಾತ್ರಿ ತಮ್ಮ ನೆಚ್ಚಿನ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ತಮ್ಮ ಎದೆಯಲ್ಲಿ ಹಾಕಿಸಿಕೊಂಡಿರುವ ಎಚ್ಡಿಕೆ ಹಚ್ಚೆಗೆ ಎಳೆನೀರು ಅಭಿಷೇಕ ಮಾಡಿಸಿದರು. 
ಜಿಲ್ಲೆ

ಎದೆಮೇಲಿನ ಎಚ್ಡಿಕೆ ಹಚ್ಚೆಗೆ ಎಳೆನೀರು ಅಭಿಷೇಕ !

ಬಾಗಲಕೋಟೆ: ಮಾಜಿ ಸಿಎಂ ಕುಮಾರಸ್ವಾಮಿ ಅವರ ೬೪ನೇ ಹುಟ್ಟು ಹಬ್ಬವನ್ನು ಬಾಗಲಕೋಟೆಯ ಅಭಿಮಾನಿ ಒಬ್ಬರು ವಿಶೇಷವಾಗಿ ಆಚರಣೆ ಮಾಡಿ, ಗಮನ ಸೆಳೆದಿದ್ದಾರೆ.

ಇಲ್ಲಿನ ವಿದ್ಯಾಗಿರಿಯಲ್ಲಿ ಪಾನ್ಶಾಪ್ಇಟ್ಟುಕೊಂಡಿರುವ ರಾಜು ಶೆಲ್ಲಿಕೇರಿ ಅವರು ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿ. ೧೫ ವರ್ಷಗಳ ಹಿಂದೆಯೇ ತಮ್ಮ ಎದೆಯ ಮೇಲೆ ಎಚ್ಡಿಕೆ ಅವರ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇರುವ ರಾಜು, ಶನಿವಾರ ಮಧ್ಯರಾತ್ರಿ ವಿಶೇಷವಾಗಿ ಆಚರಿಸಿದ್ದಾರೆ.

ತಮ್ಮ ಎದೆಯ ಮೇಲಿನ ಕುಮಾರಸ್ವಾಮಿ ಹಚ್ಚೆಗೆ ಎಳೆನೀರು ಅಭಿಷೇಕ ಮಾಡಿದ್ದಾರೆ. ಕೇಕ್ಕತ್ತರಿಸಿ ಅದನ್ನು ಹಚ್ಚೆಗೆ ಹಿಡಿದಿದ್ದಾರೆ. ಪಟಾಕಿ ಸಿಡಿಸಿ, ಸ್ನೇಹಿತರಿಗೆ ಸಿಹಿ ಹಂಚಿ, ತನ್ನ ಅಭಿಮಾನ ಮೆರೆದಿದ್ದಾರೆ. ಕಳೆದ ೧೫ ವರ್ಷಗಳಿಂದಲೂ ರಾಜು ಶೆಲ್ಲಿಕೇರಿ ಅವರು ಎಚ್ಡಿಕೆ ಹುಟ್ಟು ಹಬ್ಬವನ್ನು ವಿಶೇಷವಾಗಿಯೇ ಆಚರಿಸುತ್ತ ಬಂದಿದ್ದಾರೆ.