ಗುಂಡ್ಲುಪೇಟೆ: ರಾಷ್ಟ್ರೀಯ ಖಾದ್ಯತೈಲ ಆಂದೋಲನ ಯೋಜನೆಯಲ್ಲಿ ಎಣ್ಣೆ ತಯಾರಿಕಾ ಘಟಕಗಳಿಗೆ ಸಹಾಯಧನ ದೊರಕುತ್ತಿದ್ದು ಅರ್ಹರು ಅರ್ಜಿ ಸಲ್ಲಿಸುವಂತೆ ಕೃಷಿ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.
ತಾಲೂಕಿನಲ್ಲಿ ಎಣ್ಣೆ ಕಾಳು ಬೆಳೆ ಮುಖ್ಯವಾಗಿ ಸೂರ್ಯಕಾಂತಿ ಬೆಳೆ, ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆಯುವುದರಿಂದ ಎನ್‌ಎಂಇಒ ರಾಷ್ಟ್ರೀಯ ಖಾದ್ಯ ತೈಲ ಆಂದೋಲನ ಯೋಜನೆ ಅಡಿ ಶುದ್ಧ ಎಣ್ಣೆ ತಯಾರಿಕ ಘಟಕಗಳನ್ನು ಸ್ಥಾಪಿಸಲು ಮತ್ತು ಸಂಬಂಧಿಸಿದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಶೇ. 33 ರಷ್ಟು ಸಹಾಯಧನ ಲಭ್ಯವಿರುತ್ತದೆ. ಸಹಕಾರ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು, ರೈತರ ಉತ್ಪಾದಕ ಸಂಸ್ಥೆಗಳು, ರೈತರು/ ರೈತ ಮಹಿಳೆಯರು ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಸಂಘ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು. ಮೊದಲ ಬಂದ ಅರ್ಜಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.