ಚಿತ್ರದುರ್ಗ: ನಗರದ ಎಟಿಎಂ ದರೋಡೆಗೆ ಪ್ರಯತ್ನಿಸಿರುವ ಘಟನೆ ಗುರುವಾರ ಬೆಳಗ್ಗೆ ಜಾವ ಒಂದೂವರೆ ಹೊತ್ತಿಗೆ ನಡೆದಿದೆ.
ಮೆದೇಹಳ್ಳಿ ರಸ್ತೆ ಖಾಸಗಿ ಬಸ್ ನಿಲ್ದಾಣ ಬಳಿ ಕೆನರಾಬ್ಯಾಂಕ್ ಎಟಿಎಂ ಒಡೆದು ಹಣ ದರೋಡೆಗೆ ಮುಸುಕುದಾರಿ ಪ್ರಯತ್ನಿಸಿದ್ದಾನೆ.
ಹಾರೆ ಇತ್ಯಾದಿಗಳೊಂದಿಗೆ ದುಷ್ಕರ್ಮಿ ನಡೆಸಿರುವ ಪ್ರಯತ್ನ ವಿಫಲವಾಗಿದೆ. ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಎಎಸ್‌ಪಿ ಉಮೇಶ್ ಈಶ್ವರ ನಾಯಕ, ಡಿವೈಎಸ್‌ಪಿ ಪಿ.ಕೆ. ದಿನಕರ್ ಭೇಟಿ ನೀಡಿದ್ದರು. ನಗರ ಠಾಣೆ ಪಿಐ ಉಮೇಶ್‌ಬಾಬು ಪ್ರಕರಣ ದಾಖಲಿಸಿಕೊಂಡಿದ್ದಾರೆ.