ಜಿಲ್ಲೆ

ಎಟಿಎಂ ಜಖಂಗೊಳಿಸಿ ಹಣ ಕಳವಿಗೆ ಯತ್ನ

ಹಾಸನ: ಬ್ಯಾಂಕ್ ಆಫ್ ಬರೋಡ ಎಟಿಎಂಗೆ ನುಗ್ಗಿದ ಕಳ್ಳ ಯಂತ್ರವನ್ನು ಜಖಂಗೊಳಿಸಿ ಹಣ ಕಳವಿಗೆ ಯತ್ನಿಸಿರುವ ಘಟನೆ ರವೀಂದ್ರ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ರಾತ್ರಿ 10 ಗಂಟೆ ಸುಮಾರಿಗೆ ಮುಸುಕುಧಾರಿಯೊಬ್ಬ ಎಟಿಎಂ ಒಳ್ಳಗೆ ನುಗ್ಗಿ ಸಿಸಿ ಕ್ಯಾಮರಾದ ವೈರ್‌ಗಳನ್ನ ತುಂಡರಿಸಿ ನಂತರ ಯಂತ್ರವನ್ನು ಸಂಪೂರ್ಣವಾಗಿ ಜಖಂಗೊಳಿಸಿ ಹಣ ದೋಚಲು ಯತ್ನಿಸಿದ್ದಾನೆ. ಈ ವೇಳೆ ಎಟಿಎಂ ಯಂತ್ರದಿಂದ ಮೆಸೆಜ್ ಬ್ಯಾಂಕ್ ಅಧಿಕಾರಿಗಳಿಗೆ ರವಾನೆಯಾಗಿದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಳ್ಳ ಎಷ್ಟೇ ಪ್ರಯತ್ನಪಟ್ಟರೂ ಹಣ ಪಡೆದುಯಲು ಸಾಧ್ಯವಾಗದಿದ್ದಾಗ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ಬ್ಯಾಕ್ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಎಟಿಎಂ ಜಖಂಗೊಳಿಸಿರುವುದು ಕಂಡುಬಂದಿದೆ. ಈ ಬಗ್ಗೆ ಬ್ಯಾಂಕಿನ ಮುಖ್ಯ ಪ್ರಬಂಧಕ ವೇಣುಗೋಪಾಲ್ ರಾವ್ ಬಡಾವಣೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.