ಜಿಲ್ಲೆ

ಎಜುಕೇಷನ್ ಎಕ್ಸ್‌ಪೋ

ನಾಗೇಶ ಎಸ್

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ವತಿಯಿಂದ ಮೈಸೂರಿನ ನಂಜರಾಜ ಬಹುದ್ದೂರು ಛತ್ರದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಆಯೋಜಿಸಿದ್ದ ಎಜುಕೇಷನ್ ಎಕ್ಸ್‌ಪೋದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಭಾಗವಹಿಸಿ, ತಮ್ಮಲ್ಲಿನ ಶಿಕ್ಷಣ ಗುಣಮಟ್ಟ ಹಾಗೂ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮಾಹಿತಿ ನೀಡಿವೆ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳು ಅಭಿಪ್ರಾಯವನ್ನು ಹಂಚಿಕೊಂಡಿವೆ.

ವಿದ್ಯಾರ್ಥಿಗಳು ಹಾಗೂ ಪಾಲಕರು ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ತಿಳಿಯಲು ವಿಜಯವಾಣಿ, ದಿಗ್ವಿಜಯ ವತಿಯಿಂದ ಆಯೋಜಿಸಿದ್ದ ಎಜುಕೇಷನ್ ಎಕ್ಸ್‌ಪೋ ಉತ್ತಮ ವೇದಿಕೆಯಾಗಿದೆ. ಒಂದೇ ಸೂರಿನಡಿ ವಿವಿಧ ಶಿಕ್ಷಣ ಸಂಸ್ಥೆಗಳು ಭಾಗವಹಿಸಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ. ಜತೆಗೆ ಶಿಕ್ಷಣ ಸಂಸ್ಥೆಗಳಿಗೂ ಇದರಿಂದ ಸಾಕಷ್ಟ ಅನುಕೂಲವಾಗಿದೆ. ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಇರುವ ಶಿಕ್ಷಣದ ಗುಣಮಟ್ಟ, ಸೌಲಭ್ಯಗಳು, ಅವಕಾಶಗಳು ಸೇರಿದಂತೆ ನಾನಾ ಮಾಹಿತಿಯನ್ನು ನೀಡಲು ಅವಕಾಶವಾಗಿದೆ. ಮುಂದೆಯೂ ಇದೆ ರೀತಿ ವೇದಿಕೆ ಕಲ್ಪಿಸಲಿ.
ಡಾ.ಡಿ.ಆರ್.ಉಮೇಶ್, ಡೆಪ್ಯೂಟಿ ಡೀನ್, ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ಮಂಡ್ಯ

ಈ ರೀತಿಯ ಎಜುಕೇಷನ್ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದು, ಸಾಕಷ್ಟು ಅನುಕೂಲವಾಗಿದೆ. ಜತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿಯನ್ನು ನೀಡುವಲ್ಲಿ ಸಹಕಾರಿಯಾಗಿದೆ. ಎಕ್ಸ್‌ಪೋಗೆ ವಿದ್ಯಾರ್ಥಿಗಳಿಗಿಂತ ಪಾಲಕರೇ ಹೆಚ್ಚಾಗಿ ಭೇಟಿ ನೀಡಿದ್ದಾರೆ. ಇದರ ಬದಲಾಗಿ, ವಿದ್ಯಾರ್ಥಿಗಳು ಈ ರೀತಿಯ ಉತ್ತಮ ವೇದಿಕೆಯಲ್ಲಿ ಹೆಚ್ಚು ಭಾಗವಹಿಸುವಂತಾಗಬೇಕು. ಇದರಿಂದ ನೇರವಾಗಿ ಶಿಕ್ಷಣದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.
ರಾಘವೇಂದ್ರ ರಾಯರೆಡ್ಡಿ, ವ್ಯವಸ್ಥಾಪಕ, ಕ್ಲಾಸಿಕ್ ಕೆೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್

ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ಆಸೆ ಇರುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ನಾನು ಎರಡೇ ಬಾರಿ ಎಜುಕೇಷನ್ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದು, ವಿಜಯವಾಣಿ ಹಾಗೂ ದಿಗ್ವಿಜಯ ವತಿಯಿಂದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ನೀಡಿದ್ದು, ಸಾಕಷ್ಟು ಜನರು ಪ್ರಯೋಜನ ಪಡೆದುಕೊಂಡಿದ್ದಾರೆ.
ಹೇಮಂತ್‌ಕುಮಾರ್, ಆಡ್ಮಿಷನ್ ಆಫೀಸರ್, ಅಕ್ಷಯ್ ಎಂಜಿನಿಯರಿಂಗ್ ಕಾಲೇಜು, ತುಮಕೂರು.

ಎಜುಕೇಷನ್ ಎಕ್ಸ್‌ಪೋನಲ್ಲಿ ಮಾಡಿದ ವ್ಯವಸ್ಥೆ ತುಂಬ ಚೆನ್ನಾಗಿತ್ತು. ಈ ರೀತಿಯ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸುವಂತೆ ಮಾಡಬೇಕು. ಇದರಿಂದ ಪಿಯುಸಿ ನಂತರ ಯಾವ ಕೋರ್ಸ್‌ಗೆ ಸೇರಿದರೆ ಉತ್ತಮ ಎಂಬುದನ್ನು ತಿಳಿಯಲು ಅನುಕೂಲವಾಗಲಿದೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸುವಂತೆ ಮಾಡಲು ಈ ರೀತಿಯ ಕಾರ್ಯಕ್ರಮಗಳ ಬಗ್ಗೆ ಪಿಯುಸಿ ಕಾಲೇಜಿಗಳಿಗೆ ಮಾಹಿತಿ ನೀಡಬೇಕು. ಈ ಮೂಲಕ ಕಾಲೇಜಿನ ವತಿಯಿಂದಲೇ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಿದರೆ, ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಹಿತಿ ಲಭ್ಯವಾಗಲಿದೆ.
ಎಂ.ಪ್ರವೀಣ್, ಸಹಾಯಕ ಪ್ರಾಧ್ಯಾಪಕ, ಶ್ರೀ ಸಿದ್ಧಾರ್ಥ ಎಂಜಿನಿಯಿರಿಂಗ್ ಕಾಲೇಜು, ತುಮಕೂರು