ಹೊಸಪೇಟೆ: ಎಚ್.ಡಿ.ಕುಮಾರಸ್ವಾಮಿ ಯಾರನ್ನು ಕೇಳಿ ರಾಜೀನಾಮೆ ನೀಡಿದರು? ಆ ಕ್ಷೇತ್ರದ ಮತದಾರರನ್ನು ಮೋಸ ಮಾಡಿದ್ದಾರೆ. ಮನಬಂದAತೆ ಆಟ ಆಡೋಕೆ ಅಲ್ಲ ಜನ ನಮಗೆ ಐದು ವರ್ಷಕ್ಕೆ ಮತ ಹಾಕುವುದು ಎಂದು ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಗರ್ ವಾಪಾಸಿಯಾಗಿದ್ದಾರೆ. ಚನ್ನಪಟ್ಟಣ ಅವರಿಗೆ ಭಾರಿ ಅಟ್ಯಾಚ್ಮೆಂಟ್ ಇದೆ. ಈ ಬಾರಿ 25 ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.
ಈ ಹಿಂದೆ ಎಚ್.ಡಿ.ಕೆ. ಮಾಧ್ಯಮಗಳ ಸಂದರ್ಶನದಲ್ಲಿ ಮುಸ್ಲಿಮರಿಗೆ ನಂಬಿ ರಾಜಕೀಯ ಮಾಡಿಲ್ಲ ಎಂದಿದ್ದರು. ಮುಸ್ಲಿಮರ ಓಟು ಬೇಡ ಅಂತ ಹೇಳಿದವರು ಇಗ್ಯಾಕೆ ಮಸೀದಿ ದರ್ಗಾಗಳಿಗೆ ಓಡಾಡುತ್ತಿದ್ದಾರೆ? ಮಗನಿಗೆ ಗೆಲ್ಲಿಸಲು ಇವೇಲ್ಲ ತಂತ್ರ ನಡೆಸುತ್ತಿದ್ದಾರೆ. ಅವರ ಎನ್‌ಡಿಎ ಪಕ್ಷದ ಶಾಸಕ ಯತ್ನಾಳ್ ಅವರು ಹೇಳುತ್ತಾರೆ ಗಡ್ಡ ಬಿಟ್ಟವರು, ಬುರ್ಕಾ ಹಾಕೊಂಡವರು ನಮ್ಮ ಹತ್ತಿರ ಬರಬಾರದು. ಅವರ ಕೆಲಸ ಕಾರ್ಯಗಳು ಕೂಡ ಮಾಡಿಕೊಡಲ್ಲ ಎಂದು ಬಹಿರಂಗವಾಗಿ ಹೇಳುತ್ತಾರೆ. ಈಗ ಯಾಕೆ ಬೇಕು ಮುಸ್ಲಿಮರ ಓಟು? 2023 ರಿಂದ ಎಎಚ್‌ಡಿಕೆ ಬದಲಾಗಿದ್ದಾರೆ. ಮುಸ್ಲಿಮರ ಓಟು ಕೊಡಬೇಕು ಎಂದರೆ ವಿಜಯೇಂದ್ರ, ಸಿ.ಟಿ.ರವಿ, ಯತ್ನಾಳರಿಂದ ಮುಸ್ಲಿಮರ ಹೇಳಿಸಲಿ. ಅವರಿಗೆ ಆ ತಾಕತ್ ಇದೆಯಾ? ಎಂದರು.
ನಿಖಿಲ್ ನನ್ನ ಮಗನಿದ್ದಂತೆ. ನನ್ನ ಮಗನಿಗೆ ಎಷ್ಟು ಗೌರವ ಕೊಡ್ತಿನೋ ಆತನಿಗೂ ಅಷ್ಟೇ ಗೌರವವಾಗಿ ಕೊಡ್ತೀನಿ. ಅವರ ಪಕ್ಷದಲ್ಲೇ ಇದ್ದೆ. ನನಗೆ ಅಂಕಲ್ ಎಂದು ಕರೆಯುತ್ತಿದ್ದ. ಆತನ ಬಗ್ಗೆ ಹೆಚ್ಚೇನು ಮಾತನಾಡಲ್ಲ ಎಂದರು.