ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಎಚ್‌ಐವಿ, ಏಡ್ಸ್ ಕುರಿತು ತಿಳಿವಳಿಕೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ಮಹೇಶ್ವರಿ ಉದ್ಘಾಟಿಸಿದರು. ಡಾ.ಶಿವಕುಮಾರ ಪಾಟೀಲ್, ಡಾ.ಸುರೇಶ ಎಚ್.ಆರ್., ಶಿವಲೀಲಾ ಪಾಟೀಲ್, ಪ್ರೊ.ಲಕ್ಷ್ಮೀಬಾಯಿ ಭಂಕೂರ, ರಮೇಶ್ ಕೆ.ಬಿ.ಇತರರಿದ್ದರು. 
ಜಿಲ್ಲೆ

ಎಚ್‌ಐವಿಗೆ ತಡೆಗೆ ಮುಂಜಾಗ್ರತೆ ಮದ್ದು

ಬಸವಕಲ್ಯಾಣ: ರೋಗ ಬಂದಾಗ ಚಿಕಿತ್ಸೆ ಪಡೆವುದಕ್ಕಿಂತ ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಅವಶ್ಯಕ ಎಂದು ವೈದ್ಯಾಧಿಕಾರಿ ಡಾ.ಮಹೇಶ್ವರಿ ಹೇಳಿದರು.

ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ರೆಡ್ ರಿಬ್ಬನ್ ಕ್ಲಬ್, ರಾಜ್ಯ ಏಡ್ಸ್ ಪ್ರೀವೆನ್ಷನ್ ಸೂಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಮತ್ತು ಮಹಾವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಎಚ್‌ಐವಿ, ಏಡ್ಸ್ ಕುರಿತು ತಿಳಿವಳಿಕೆ ಹಾಗೂ ರಕ್ತದಾನದ ಮಹತ್ವ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂಜಾಗ್ರತೆ ವಹಿಸಿದ್ದಲ್ಲಿ ಎಚ್‌ಐವಿ, ಏಡ್ಸ್ ರೋಗ ನಿಯಂತ್ರಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್ ಮಾತನಾಡಿ, ರಕ್ತದಾನ ಮಹಾದಾನವಾಗಿದ್ದು, ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ರಕ್ತದ ಕೊರತೆಯಿಂದ ಬಳಲುತ್ತಿರುವರ ಜೀವ ಉಳಿಸಲು ಸಹಕಾರಿಯಾಗುತ್ತದೆ. ರಕ್ತದಾನ ಮಾಡುವ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಐಸಿಟಿಸಿ ಆಪ್ತ ಸಮಾಲೋಚಕಿ ಶಿವಲೀಲಾ ಪಾಟೀಲ್ ಮಾತನಾಡಿ, ಎಚ್‌ಐವಿ ಬರುವ ಬಗ್ಗೆ ಮತ್ತು ಬರದಂತೆ ತಡೆಯಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಎನ್‌ಎಸ್‌ಎಸ್ ಅಧಿಕಾರಿ ಡಾ.ಸುರೇಶ ಎಚ್.ಆರ್., ಪ್ರೊ.ವಿಠೋಬಾ ಡೊಣ್ಣೆಗೌಡರ, ಪ್ರೊ.ಲಕ್ಷ್ಮೀಬಾಯಿ ಭಂಕೂರ, ಆನಂದ ಎಂ., ಆನಂದ ಬಿರಾದಾರ ಇತರರಿದ್ದರು. ರಾಸಾಯನ ಶಾಸ್ತç ವಿಭಾಗದ ಮುಖ್ಯಸ್ಥ ಡಾ.ರಮೇಶ ಕೆ.ಬಿ.ಸ್ವಾಗತಿಸಿದರು. ಉಪನ್ಯಾಸಕ ಮಹದೇವ ಡಿ. ವಂದಿಸಿದರು. ಕು.ನೇತ್ರ ವಿ. ನಿರೂಪಣೆ ಮಾಡಿದರು. ಕು.ಅಂಬಿಕಾ ಪ್ರಾರ್ಥನ ಗೀತೆ ಹಾಡಿದರು. ಭಾಷಣ ಸ್ಪರ್ಧೆಯಲ್ಲಿ ಕು.ಅಶ್ವಿನಿ ಪ್ರಥಮ, ಕು.ಅರ್ಪಿತ ದ್ವಿತೀಯ, ಕು.ಸಾಕ್ಷಿ ತೃತೀಯ ಬಹುಮಾನ ಪಡೆದರು.