ಕಲಬುರಗಿ: ಹಿಂದುಸ್ತಾನ ಏರೋನಾಟಿಕಲ್ಸ್ ಲಿಮಿಟೆಡ್ (ಎಚ್‌ಎಎಲ್)ನ ಶಿಶುಕ್ಷು (ಅಪ್ರಂಟಿಶಿಪ್) ತರಬೇತಿ ಯೋಜನೆಯಲ್ಲಿ ಜಿಲ್ಲೆ ಸೇರಿ ಕಲ್ಯಾಣ ನಾಡಿನ ಜಿ¯್ಲÉಗಳ ಮಕ್ಕಳಿಗೆ ಆದ್ಯತೆ ನೀಡುತ್ತೇವೆ ಎಂದು ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕಿ ಚಂದ್ರಲಾಂಬಾ ಹೇಳಿದರು.
ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಎಚ್‌ಎಎಲ್ ಕಂಪನಿ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತುದಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೇಳದಲ್ಲಿ ಮಾತನಾಡಿ, ಎಚ್‌ಎಎಲ್ ವಾರ್ಷಿಕ ೨,೨೦೦ ಶಿಶುಕ್ಷುಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಆದ್ದರಿಂದ ಮೇಳ ಆಯೋಜಿಸಿದ್ದು, ಅಗತ್ಯ ಮಾನವ ಸಂಪನ್ಮೂಲ ಲಭ್ಯವಾಗಬೇಕು ಎಂದರು.
ಕಲ್ಯಾಣ ನಾಡಿನ ಜನರು ಕಠಿಣ ಪರಿಶ್ರಮಿಗಳಾಗಿದ್ದು, ಅಭ್ಯಾಸ ಮಾಡುವ, ಪ್ರಯತ್ನಶೀಲರಾಗಿದ್ದಾರೆ. ಕೌಶಲವಂತ ಯುವಕರಿಗೆ ಎಚ್‌ಎಎಲ್‌ನಲ್ಲಿ ಅವಕಾಶಗಳಿವೆ. ಸಂಸ್ಥೆಯಲ್ಲಿ ಹೆಚ್ಚಿನ ಕೌಶಲ ತರಬೇತಿ, ಸಂವಹನ ತರಬೇತಿ ನೀಡಲಾಗುವುದು ಎಂದರು.
ಸರ್ಕಾರಿ ಐಟಿಐ ಪ್ರಾಚಾರ್ಯ ಮುರಲೀದರ ರತ್ನಗಿರಿ ಮಾತನಾಡಿ, ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ಎಚ್‌ಎಎಲ್‌ನಂತ ದೊಡ್ಡ ಕಂಪನಿ ಅವಕಾಶ ಪುನಃ ದೊರೆಯುವುದಿಲ್ಲ ಎಂದರು.
ವಿಭಾಗೀಯ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ ಮಾತನಾಡಿ, ಕಲಬುರಗಿ ಮಕ್ಕಳು ಮುಗ್ದರು, ದೊಡ್ಡ ಕಂಪನಿಗಳಲ್ಲಿ ಅವಕಾಶ ಸಿಕ್ಕಲ್ಲಿ ನಿಭಾಯಿಸುವ ಶಕ್ತಿ, ಜಾಣತನ ಹೊಂದಿದ್ದಾರೆ ಎಂದರು.
ಕೇAದ್ರೀಯ ವಿವಿ ಸಹ ಪ್ರಾಧ್ಯಾಪಕ ಅಪ್ಪುಗೇರೆ ಸೋಮಶೇಖರ ಮಾತನಾಡಿದರು. ಎಚ್‌ಎಲ್‌ನ ಹಿರಿಯ ಮುಖ್ಯ ಬೋಧಕ ಕೆಬಿ ಶಿವರಾಮ, ಮುಖ್ಯ ಬೋಧಕ ಸಿಆರ್ ಸಾಹು, ಸರ್ಕಾರಿ ಐಟಿಐ (ಮಹಿಳೆ) ಪ್ರಾಚಾರ್ಯೆ ರುಬಿನಾ ಪರ್ವಿನ್, ವಿಇಎಸ್ ಐಟಿಐನ ಶೀಕಲ್ ಅನ್ಸಾರಿ ಇತರರಿದ್ದರು. ತರಬೇತಿ ಅಧಿಕಾರಿ ಭಾರತಿ ಮಹಾದೇವಪ್ಪ ನಿರೂಪಣೆ ಮಾಡಿದರು.