Oplus_131072 
ಜಿಲ್ಲೆ

ಎಚ್.ಬಿ.ರೇವಣ್ಣ ಅಧ್ಯಕ್ಷ, ಬಸವಶೆಟ್ಟಿ ಉಪಾಧ್ಯಕ್ಷ

ನಂಜನಗೂಡು: ತಾಲೂಕಿನ ಹೆಗ್ಗಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎಚ್ ಬಿ ರೇವಣ್ಣ, ಉಪಾಧ್ಯಕ್ಷರಾಗಿ ಬಸವ ಶೆಟ್ಟಿ ಅವಿರೋಧ ಆಯ್ಕೆಯಾದರು.

ಸಂಘದ ಆವರಣದಲ್ಲಿ ಗುರುವಾರ ಚುನಾವಣೆ ನಿಗದಿಯಾಗಿತ್ತು. ಎರಡೂ ಸ್ಥಾನಗಳಿಗೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಸಹಕಾರ ಅಭಿವೃದ್ಧಿ ಅಧಿಕಾರಿ ಸಿ.ಪ್ರಸಾದ್ ಅವಿರೋಧ ಆಯ್ಕೆ ಘೋಷಿಸಿದರು.

ಅಧ್ಯಕ್ಷ ಎಚ್.ಬಿ.ರೇವಣ್ಣ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಸಂಘದಿಂದ ಸಿಗುವ ಸಾಲ ಸೌಲಭ್ಯಗಳನ್ನು ಸಂಘದ ವ್ಯಾಪ್ತಿಯ ಸದಸ್ಯರಿಗೆ ಪ್ರಾಮಾಣಿಕವಾಗಿ ಕೊಡಿಸುತ್ತೇನೆ ಎಂದರು.

ನಿರ್ದೇಶಕರಾದ ಕೊಂಗಳ್ಳಿ ಶಿವಬಸಪ್ಪ, ಹರತಲೆ ಮಲ್ಲೇಶ, ದೇಬೂರು ಶಿವಕುಮಾರ್, ಚಿಕ್ಕಲಿಂಗಯ್ಯ, ಡಿ.ಎಂ.ಶಿವಪ್ರಕಾಶ್, ಕಮಲಮ್ಮ, ಮಹದೇವಸ್ವಾಮಿ, ಚಿಕ್ಕ ರಂಗನಾಯ್ಕ, ವೆಂಕಟೇಶ್, ನಾಗಮ್ಮ, ಮುಖಂಡರಾದ ದೊಡ್ಡ ಅಂಕಟ್ಟಿ, ಸೋಮಣ್ಣ, ರಾಜು, ಶಿವು, ಪರಶಿವಮೂರ್ತಿ, ಮಹೇಶ್, ಕೆ.ಸಿ.ಬಸವಣ್ಣ, ಬಸವರಾಜು, ಸಿಬ್ಬಂದಿ ರವಿ, ಆನಂದ್ ಉಪಸ್ಥಿತರಿದ್ದರು.