ಜಿಲ್ಲೆ

ಎಚ್.ಕೆ.ಎಸ್ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ

 ಹಾಸನ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವ ನಡೆಯುತ್ತಿರುವ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಚ್.ಕೆ.ಎಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಇತ್ತೀಚೇಗೆ ನಗರದ ಸಂತ ಜೋಸೆಫ್ ಕಾಲೇಜಿನಲ್ಲಿ ನಡೆದ ಕಾಮರ್ಸ್ ಫೆಸ್ಟ್ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.

ಈ ಸ್ಪರ್ಧೆಯಲ್ಲಿ 55 ವಿದ್ಯಾರ್ಥಿಗಳು ಭಾಗವಹಿಸಿ, ತ್ರಿಶಾ ಹಾಗೂ ತಂಡ ಗ್ರೂಪ್ ಡ್ಯಾನ್ಸ್‌ನಲ್ಲಿ ಪ್ರಥಮ, ಸೌಂದರ್ಯ ಹಾಗೂ ತಂಡ ಗೀತ ಗಾಯನದಲ್ಲಿ ಪ್ರಥಮ, ಗೌತಮ್ ಹಾಗೂ ತಂಡ ರೀಲ್ಸ್ ಮೇಕಿಂಗ್‌ನಲ್ಲಿ ಪ್ರಥಮ, ಸಿ.ವೈ. ಗೌತಮ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಪ್ರೀತಿ ಹಾಗೂ ತಂಡ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಪ್ರಥಮ, ರೇಷ್ಮಾ ಮತ್ತು ಶರ್ವಾಣಿ ಸಣ್ಣ ಕಥೆಗಳ ಬರಹದಲ್ಲಿ ದ್ವಿತೀಯ, ಬಾಲಕರ ಥ್ರೋ ಬಾಲ್ ತಂಡ ದ್ವಿತೀಯ ಬಹುಮಾನವನ್ನು ಪಡೆದು ದ್ವಿತೀಯ ರನ್ನರ್ ಅಪ್ ಚಾಂಪಿಯನ್ ಶಿಪ್ ಪಡೆದು ಅದ್ಭುತ ಸಾಧನೆ ಗೈದಿದ್ದಾರೆ.

ವಿಜೇತರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಸುರೇಶ್, ಕಾರ್ಯದರ್ಶಿ ಎಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಸಂಯೋಜಕಿ ಸಿ.ಎಲ್.ಅಶ್ವಿನಿ , ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.