ಜಿಲ್ಲೆ

ಎಚ್.ಎಸ್. ಮಹದೇವಪ್ರಸಾದ್ ಪುಣ್ಯಸ್ಮರಣೆ

ಗುಂಡ್ಲುಪೇಟೆ; ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ದಿ.ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ 8ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ಈ ಅಂಗವಾಗಿ ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ಪುತ್ರ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಪತ್ನಿ ವಿದ್ಯಾಗಣೇಶ್, ಸಹೋದರ ಎಚ್.ಎಂ.ನಂಜುಂಡಪ್ರಸಾದ್, ಪತ್ನಿ ರೂಪಾ, ಸಹೋದರಿ ಪ್ರೇಮಾ ಡಾ.ಚಂದ್ರಚೂಡ ಹಾಗೂ ಕುಟುಂಬದ ಸದಸ್ಯರು ಗ್ರಾಮದ ಹೊರವಲಯದಲ್ಲಿರುವ ಬೊಗ್ಗನಪುರ ಫಾರ್ಮ್‌ನಲ್ಲಿರುವ ಮಹದೇವಪ್ರಸಾದ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ಜನಪ್ರತಿನಿಧಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಗ್ರಾಮದ ಎಚ್.ಎನ್.ಎಸ್.ಸಮುದಾಯ ಭವನದಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.