ಜಿಲ್ಲೆ

ಎಚ್.ಎಂ. ರೇವಣ್ಣಗೆ ಎಂಎಲ್ಸಿ ಮಾಡಿ

ಬೀದರ್: ಹಿಂದುಳಿದ ವರ್ಗಗಳ ನಾಯಕ, ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುವಂತೆ ವಿವಿಧ ಸಂಘಟನೆ ಮುಖ್ಯಸ್ಥರು, ಮುಖಂಡರು ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ರೇವಣ್ಣ ಅವರನ್ನು ಎಂಎಲ್ಸಿ ಮಾಡಿದರೆ ಹಿಂದುಳಿದ ವರ್ಗದವರಿಗೆ ನ್ಯಾಯ ಸಿಕ್ಕಿದಂತಾಗಲಿದೆ. ರೇವಣ್ಣ ತಮ್ಮ (ಸಿದ್ದರಾಮಯ್ಯ) ಜತೆ ರಾಜ್ಯಾದ್ಯಂತ ಸಂಚರಿಸಿ ಸಂಘಟನೆ ಮೂಲಕ ಪಕ್ಷವನ್ನು ಅಕಾರಕ್ಕೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಎಂಎಲ್ಸಿ ಮಾಡಬೇಕು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ ಚಿದ್ರಿ, ಜಿಪಂ ಮಾಜಿ ಅಧ್ಯಕ್ಷರಾದ ಗೀತಾ ಚಿದ್ರಿ, ವಿಜಯಕುಮಾರ ಖಾಶೆಂಪುರ, ಬಿಡಿಎ ಮಾಜಿ ಅಧ್ಯಕ್ಷ ಮುರಳೀಧರ ಎಕಲಾರಕರ್, ಜಿಲ್ಲಾ ಗೊಂಡ ನೌಕರ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್. ಕಟಗಿ, ಔರಾದ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಾಳಪ್ಪ ಅಡಸಾರೆ, ಪ್ರಮುಖರಾದ ಬಸವರಾಜ ಹೇಡೆ, ಬಕ್ಕಪ್ಪ ಶೇರಿಕಾರ, ಮಲ್ಲಿಕಾರ್ಜುನ ಬಿರಾದಾರ್, ಹಣಮಂತ ಮಲ್ಕಾಪುರ, ಬಾಬು ಸಂಗೋಳಗಿ, ಲೋಕೇಶ ಮರ್ಜಾಪುರ ಕೋರಿದ್ದಾರೆ.