ನಿರಂತರ ಮಳೆಗೆ ಭಾಲ್ಕಿ ತಾಲೂಕಿನಲ್ಲಿ ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಶರದ ದುರ್ಗಾಳೆ, ಕೈಲಾಸ ಪಾಟೀಲ, ಜೈರಾಜ ಕೊಳ್ಳಾ, ಕಿಶನರಾವ ಪಾಟೀಲ ಇಂಚೂರಕರ, ಕೆ.ಡಿ.ಗಣೇಶ, ಸಂಗಮೇಶ ಟಂಕಸಾಲೆ ಇತರರಿದ್ದರು. 
ಜಿಲ್ಲೆ

ಎಕರೆಗೆ ರು.೨೫ ಸಾವಿರ ಪರಿಹಾರ ನೀಡಿ

ಭಾಲ್ಕಿ: ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ನೇತೃತ್ವದಲ್ಲಿ ಬುಧವಾರ ನವಚೈತನ್ಯ ಸೇವಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು.

ಪಟ್ಟಣದ ವಿವಿಧ ಬೀದಿಗಳಲ್ಲಿ ರೈತರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸಿಲ್ ಕಚೇರಿಯಲ್ಲಿ ಸಮಾವೇಶಗೊಳಿಸಲಾಯಿತು. ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿ, ಆಗಷ್ಟ್ ಕೊನೆಯಲ್ಲಿ ಸುರಿದ ಭಾರಿ ಮಳೆಗೆ ತಾಲೂಕಿನ ೩೫ ಸಾವಿರ ಎಕರೆ ಜಮೀನಿನಲ್ಲಿ ಬೆಳೆದ ಉದ್ದು, ಹೆಸರು, ಸೋಯಾ, ತೊಗರಿ, ಕಬ್ಬು ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಆದರೆ ಕೃಷಿ ನಿದೇರ್ಶಕರು ೩೩ ಸಾವಿರ ಎಕರೆ ಜಮೀನಿನಲ್ಲಿ ಬೆಳೆ ಹಾನಿಯಾಗಿರುವುದಾಗಿ ವರದಿ ನೀಡಿದ್ದಾರೆ. ಕಾರಣ ತಕ್ಷಣವೇ ರೈತರ ಬೆಳೆ ಹಾನಿಗೆ ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ನೀಡಬೇಕು. ಬೆಳೆವಿಮೆ ಕಂಪನಿಗಳ ಜತೆ ಸಭೆ ನಡೆಸಿ ಹೆಚ್ಚಿನ ಬೆಳೆ ವಿಮೆ ಸಿಗುವಂತೆ ಮಾಡಬೇಕು. ಬೆಳೆವಿಮೆ ಕಂಪನಿಯವರು ರೈತರಿಂದ ಹಣ ವಸೂಲಿ ಮಾಡುತ್ತ, ದಲ್ಲಾಳಿ ಕೆಲಸ ಮಾಡುತ್ತಿರುವುದು ತಪ್ಪಿಸಬೇಕು. ಕಾರಂಜಾ ನದಿಯಿಂದ ನೀರು ಬಿಟ್ಟಾಗ ಸಾಕಷ್ಟು ಸಮಸ್ಯೆಯಾಗುತ್ತಿರುವ ದಾಡಗಿ, ನಿಡೇಬಾನ-ಆನಂದವಾಡಿ, ಇಂಚೂರ ಸೇತುವೆಗಳ ಎತ್ತರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಹತ್ತಿರ ಕೇಳಿರುವ ೫೦೦ ಕೋಟಿ ರೂ. ಅನುದಾನ ಜಿಲ್ಲೆಯ ರೈತರಿಗೆ ತಲುಪುವಂತೆ ಮಾಡಬೇಕು. ಸರ್ಕಾರದಿಂದ ೧೦೦ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿ ಬಿಎಸ್‌ಎಸ್‌ಕೆ ಕಾರ್ಖಾನೆ ಕೂಡಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ನವಚೈತನ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶರದ ದುರ್ಗಾಳೆ, ಉಪಾಧ್ಯಕ್ಷ ಕೈಲಾಸ ಪಾಟೀಲ, ಕಾರ್ಯದರ್ಶಿ ಜೈರಾಜ ಕೊಳ್ಳಾ, ಕಿಶನರಾವ ಪಾಟೀಲ ಇಂಚೂರಕರ, ಕೆ.ಡಿ.ಗಣೇಶ, ಸಂಗಮೇಶ ಟಂಕಸಾಲೆ, ಮನೋಹರ ಪಾಟೀಲ, ಬಾಲಾಜಿ ರೋಡೆ, ಮಾದಪ್ಪ ದೇಶಮುಖ, ಶರದ ಪಾಟೀಲ, ರವಿಶಂಕರ ಶೇರಿಕಾರ ಡೊಣಗಾಪುರ ಇತರರಿದ್ದರು.